ಕುಂಬಳೆ: ಕೋವಿಡ್ - 19 ವೈರಸ್ ಬಾಧೆ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ಕಾಸರಗೋಡು ಜಿಲ್ಲೆಯ ಯಕ್ಷಗಾನ ಕಲಾವಿದರಿಗೆ ಯಕ್ಷದ್ರುವ ಪಟ್ಲ ಫೌಂಡೇಶನ್ ಮಂಗಳೂರು ನೀಡುವ ಪಡಿತರ ವಿತರಣೆಯ 2ನೇ ಹಂತವಾಗಿ ಬುಧವಾರ ಪಟ್ಲ ಪೌಂಡೇಶನ್ ಕುಂಬಳೆ ಘಟಕದ ಪ್ರಮುಖರಾದ ದಿವಾಣ ಶಿವಶಂಕರ ಭಟ್ ಅವರ ನೇತೃತ್ವದಲ್ಲಿ ಬದಿಯಡ್ಕದ ವೈ ರಾಘವೇಂದ್ರ ಪ್ರಸಾದ್‍ರ ಸಹಕಾರದೊಂದಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ 25 ಕೆ.ಜಿ ಅಕ್ಕಿ ಮತ್ತು ಇತರ ಅಗತ್ಯ ದಿನಬಳಕೆ ವಸ್ತುಗಳನ್ನು ಕಲಾವಿದರಿಗೆ ನೀಡಲಾಯಿತು.


