ತಿರುವನಂತಪುರ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದ್ಯ ಲಭ್ಯವಾಗದೆ ಶಾರೀರಿಕ ಅಸೌಖ್ಯ ಕಾಣಿಸಿಕೊಂಡವರಿಗೆ ಮನೆಗಳಿಗೆ ಮದ್ಯ ಪೂರೈಸುವ ಅಬಕಾರಿ ಇಲಾಖೆ ತೀರ್ಮಾನಕ್ಕೆ ರಾಜ್ಯ ಹೈಕೋರ್ಟು ತಡೆಯಾಜ್ಞೆ ನೀಡಿದೆ. ಸಂಸದ ಟಿ.ಎನ್ ಪ್ರತಾಪನ್ ಅವರ ಅರ್ಜಿ ಪರಿಗಣಿಸಿ ರಾಜ್ಯ ಉಚ್ಛ ನ್ಯಾಯಾಲಯ ಮೂರು ವಾರಗಳ ವರೆಗೆ ಈ ತಡೆಯಾಜ್ಞೆ ವಿಧಿಸಿದೆ. ವೈದ್ಯರ ಶಿಫಾರಸುಪತ್ರ ಪ್ರಕಾರ ಒಬ್ಬರಿಗೆ ವಾರಕ್ಕೆ ಮೂರು ಲೀ. ಲಿಕ್ಕರ್ ವಿತರಿಸಲು ಅಬಕಾರಿ ಇಲಾಖೆ ತೀರ್ಮಾನಿಸಿತ್ತು. ಈ ಬಗ್ಗೆ ಬೀವರೇಜಸ್ ಕಾರ್ಪೋರೇಶನ್ ಎಂ.ಡಿ ಸುತ್ತೋಲೆಯನ್ನೂ ಕಳುಹಿಸಿದ್ದರು. ಪ್ರಸಕ್ತ ಅಬಕಾರಿ ಇಲಾಖೆಯ ಆದೇಶ ಮತ್ತು ಸುತ್ತೋಲೆಯನ್ನು ಹೈಕೋರ್ಟು ರದ್ದುಪಡಿಸಿದೆ. ಸರ್ಕಾರದ ತೀರ್ಮಾನದ ವಿರುದ್ಧ ಸರ್ಕಾರಿ ವೈದ್ಯರೂ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದರು.
ಬೀವರೇಜಸ್ ಔಟ್‍ಲೆಟ್‍ಗೆ ಲಭಿಸುವ ಪಾಸ್ ಆಧರಿಸಿ, ಮನೆಗಳಿಗೆ ಮದ್ಯ ತಲುಪಿಸಲು ವ್ಯವಸ್ಥೆ ಮಾಡಲಾಗಿತ್ತು.


