ಮಂಜೇಶ್ವರ : ಕರೋನಾ ಹಿನ್ನಲೆಯಲ್ಲಿ ಲಾಕ್ ಡೌನ್‍ನಿಂದಾಗಿ ಮನೆಯಲ್ಲೇ ಉಳಿಯುವಂತಾದ ನಿರ್ಗತಿಕ ಕುಟುಂಬಗಳಿಗೆ ಕಿಟ್ ವಿತರಿಸುವ ಮೂಲಕ ಗ್ರಾಮ ಪಂಚಾಯತಿ ಸದಸ್ಯರೋರ್ವರು ಮಾನವೀಯತೆ ಮೆರೆದಿದ್ದಾರೆ.
ಮಂಜೇಶ್ವರ ಗ್ರಾಮ ಪಂಚಾಯತಿ 10 ನೇ ವಾರ್ಡ್ ಸದಸ್ಯ ಮುಸ್ಲಿಂಲೀಗ್ ನೇತಾರ ಬಶೀರ್ ಕನಿಲ ಕಿಟ್ ವಿತರಿಸಿದ ಸದಸ್ಯ. ತನ್ನ ವಾರ್ಡ್ ಗೊಳಪಟ್ಟ ಅರಿಮಲೆ, ಕನಿಲ, ಬಡಾಜೆ ಎಂಬ ಪ್ರದೇಶಗಳಲ್ಲಿ ನೂರರಷ್ಟು ನಿರ್ಗತಿಕ ಕುಟುಂಬಗಳಿಗೆ ಕಿಟ್ ನೀಡಲಾಗಿದೆ. 21 ದಿನಗಳಿಗೆ ಅಗತ್ಯ ವಿರುವ ಅಕ್ಕಿ, ಸಕ್ಕರೆ, ಸಹಿತ ಧಾನ್ಯಗಳನ್ನೊಳಗೊಂಡ ಅಗತ್ಯ ವಸ್ತುಗಳನ್ನು ವಿತರಿಸಲಾಗಿದೆ.


