ಕಾಸರಗೋಡು: ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಅಹೋರಾತ್ರಿಯ ಹೋರಾಟದಲ್ಲಿ ಪರಿಪೂರ್ಣ ವಿಜಯ ಸಮೀಪದಲ್ಲಿದೆ. ಇದಕ್ಕೊಂದು ನಿರ್ದಶನ ಕಾಸರಗೋಡು ಜನರಲ್ ಸರಕಾರಿ ಆಸ್ಪತ್ರೆ.
ಇಡೀ ದೇಶಕ್ಕೆ ಮಾದರಿಯಾದ ಜನಪರ ಚಿಕಿತ್ಸಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸರಕಾರಿ ಚಿಕಿತ್ಸಾಲಯ, ಅತ್ಯಧಿಕ ಪ್ರಮಾಣದಲ್ಲಿ ಕೋವಿಡ್ ರೋಗಿಗಳು ಗುಣಮುಖರಾಗುವಲ್ಲಿ ಪ್ರಧಾನ ಪಾತ್ರ ವಹಿಸಿದ ಆಸ್ಪತ್ರೆ ಎಂಬ ಹಿರಿಮೆಗೂ ಕಾರಣವಾಗಿದೆ. ಇಲ್ಲಿ ಕೊರೋನಾದಿಂದ ದಾಖಲಾಗಿದ್ದ 91 ರೋಗಿಗಳಲ್ಲಿ 82 ಮಂದಿ ಗುಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ಮೂಲಕ ಶೇ 90.10 ಮಂದಿ ಗುಣಮುಖರಾಗಿದ್ದಾರೆ. ಸೋಮವಾರ(ಏ.20) ಮಾತ್ರ 15 ಮಂದಿ ಇಲ್ಲಿ ಬಿಡುಗಡೆಗೊಂಡಿದ್ದಾರೆ. ಉಳಿದವರು ಶೀಘ್ರದಲ್ಲೇ ಗುಣಮುಖರಾಗುವರು ಎಂದು ವೈದ್ಯರು ಭರವಸೆಯಿಂದ ತಿಳಿಸುತ್ತಾರೆ.
ಜಿಲ್ಲೆಯಲ್ಲಿ ಒಟ್ಟು 169 ಮಂದಿ ಮಂದಿಗೆ ಕೋವಿಡ್ 19 ಸೋಂಕು ಖಚಿತವಾಗಿತ್ತು. ಇವರಲ್ಲಿ 142 ಮಂದಿ ಗುಣಮುಖರಾಗಿದ್ದಾರೆ. ಇವರಲ್ಲಿ 82 ಮಂದಿ ಕಾಸರಗೋಡು ಜನರಲ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು.
ಒಗ್ಗಟ್ಟಿನ ಯತ್ನವೇ ಈ ಯಶಸ್ಸಿಗೆ ಕಾರಣ ಎಂದು ಇಲ್ಲಿ ಕೋವಿಡ್ ಚಿಕಿತ್ಸೆಗೆ ನೇತೃತ್ವ ವಹಿಸುತ್ತಿರುವ ಡಾ.ಕುಂuಟಿಜeಜಿiಟಿeಜರಾಮನ್ ಅಭಿಪ್ರಾಯಪಡುತ್ತಾರೆ. ವೈದ್ಯರಿಂದ ತೊಡಗಿ ಶುಚೀಕರಣದ ಸಿಬ್ಬಂದಿ ವರೆಗೆ ಎಲ್ಲರೂ ವ್ಯಕ್ತಿಗತ ವಿಚಾರಗಳನ್ನು ಮರೆತು ನಡೆಸುತ್ತಿರುವ ನಿಸ್ಪೃಹ, ಅಹೋರಾತ್ರಿ ದುಡಿಮೆಯೇ ಇದಕ್ಕೆ ಕಾರಣ ಎಂದವರು ತಿಳಿಸಿದರು.


