ಕಾಸರಗೋಡು: ನಗರದ ನುಳ್ಳಿಪಾಡಿಯ ಕೇರ್‍ವೆಲ್ ಆಸ್ಪತ್ರೆಯ ಮಾಲಕ, ಖ್ಯಾತ ಅನಸ್ತೇಶಿಯಾ ವಿಭಾಗ ತಜ್ಞ ಡಾ|ಸಿ.ಎ.ಅಬ್ದುಲ್ ಹಮೀದ್(62) ಅವರು ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ನಿಧನ ಹೊಂದಿದರು.
ಕಾಸರಗೋಡು ಪ್ರೈಡೇ ಕ್ಲಬ್ ಅಧ್ಯಕ್ಷ, ಕಾಸರಗೋಡು ಇಸ್ಲಾಮಿಕ್ ಸೆಂಟರ್ ಅಧ್ಯಕ್ಷ, ಸೌಹೃದಂ ಕಾಸರಗೋಡು ಮೊದಲಾದ ಸಂಸ್ಥೆಗಳಲ್ಲಿ ಸಕ್ರಿಯವಾಗಿ ದುಡಿದಿದ್ದರು. ಪತ್ನಿ ಡಾ.ಸುಹರಾ, ಮೂವರು ಪುತ್ರರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.


