HEALTH TIPS

ಕೊರೊನಾ ವೇಳೆಯಲ್ಲಿ ಏನೆಲ್ಲ!- ಕೇರಳ ಕರ್ನಾಟಕ ಗಡಿ ತರ್ಕ: ತಲಪಾಡಿ ಗಾಡಿಯಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್

   
     ಮಂಜೇಶ್ವರ: ಕಾಸರಗೋಡು ಜಿಲ್ಲೆ ಉದಯದ ಬಳಿಕ ಕರ್ನಾಟಕ ಕೇರಳದ ಗಡಿ ವಿವಾದ ಈ ತನಕ ಇತ್ಯರ್ಥವಾಗಿರಲಿಲ್ಲ. ಇದೀಗ ಕೊರೊನಾ ವೈರಸ್ ನ ಹಿನ್ನೆಲೆಯಲ್ಲಿ ಉಂಟಾದ ಲಾಕ್ ಡೌನ್ ನ ಬಳಿಕ ಕೇರಳ ಪೆÇೀಲೀಸರ ತಪಾಸಣಾ ಕೇಂದ್ರ ಗಡಿ ಕಳೆದು ಇರುವ ಹಿನ್ನೆಲೆಯಲ್ಲಿ ಸರಿಯಾದ ಗಾಡಿಯನ್ನು ಪತ್ತೆ ಹಚ್ಚಿ ಗಡಿಯಲ್ಲೇ ತಪಾಸಣಾ ಕೇಂದ್ರವನ್ನು ಮಾಡುವಂತೆ ಕಾಸರಗೋಡು ಡಿ ಸಿ ಆದೇಶಿಸಿದ್ದರು .
      ಇದರಂತೆ ಬುಧವಾರ ಸಂಜೆ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ಗಡಿಯನ್ನು ಪತ್ತೆ ಹಚ್ಚಿ ತಪಾಸಣಾ ಕೇಂದ್ರವನ್ನು ನಿರ್ಮಿಸುತ್ತಿರುವ ಮಧ್ಯೆ ಕರ್ನಾಟಕ ಪೆÇಲೀಸರು ತಡೆಯೊಡ್ಡಿದಾಗ ಭಾರಿ ವಿವಾದಕ್ಕೆ ಕಾರಣವಾಯಿತು. ಬಳಿಕ ಉಭಯ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಪೆÇಲೀಸರು ಆಗಮಿಸಿ ವಿವಾದ ಇತ್ಯರ್ಥವಾಗದ ಹಿನ್ನೆಲೆಯಲ್ಲಿ  ಗುರುವಾರ ಬೆಳಿಗ್ಗೆ ಕಾಸರಗೋಡು ಜಿಲಾಧಿಕಾರಿ, ಪೆÇಲೀಸ್ ವರಿಷ್ಠರು ಆಗಮಿಸಿ ಕೇರಳ ಪೆÇಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸರ್ವೇ ನಡೆಯಿತು. ಸರ್ವೇ ನಡೆದ ಬಳಿಕ ಗಡಿ ವಿವಾದ ಇತ್ಯರ್ಥವಾಗಲಿದೆ . ಈಗಲೂ ಸ್ಥಳದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries