HEALTH TIPS

ಕೋವಿಡ್ ನಿಯಂತ್ರಕ ಪ್ರತಿರೋಧ ಚುಚ್ಚುಮದ್ದು ಶಿಬಿರಗಳ ಪುನರಾರಂಭ

 
          ಕಾಸರಗೋಡು:  ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಸಲುವಾಗಿ ಬ್ರೇಕ್ ದಿ ಚೈನ್ ಮಾನದಂಡಗಳ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿ ಮಕ್ಕಳಿಗೆ ಪ್ರತಿರೋಧ ಚುಚ್ಚುಮದ್ದು ಶಿಬಿರಗಳು ಪುನರಾರಂಭಗೊಂಡಿವೆ. ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತರು ನೀಡುವ ಸಮಯಾವಧಿ ಪ್ರಕಾರ ಮಾತ್ರ ಇಮ್ಯುನೈಸೇಷನ್ ಸೈಟ್ ಗಳಿಗೆ ತೆರಳಬೇಕು. ಮಕ್ಕಳ ಜೊತೆಗೆ ಒಬ್ಬರು ಮಾತ್ರ ಚುಚುಮದ್ದು ನೀಡಿಕೆ ಕೇಂದ್ರಕ್ಕೆ ಪ್ರವೇಶಾತಿ ನೀಡಲಾಗುವುದು.
       ಶಿಬಿರವನನು ಪ್ರವೇಶಿಸುವ ವೇಳೆ ಕೈಗಳ ಶುಚಿತ್ವ ಖಚಿತಪಡಿಸಿಕೊಳ್ಳಬೇಕು. ಕೋವಿಡ್ 19 ಸೋಂಕು ಬಧೆಯ ಶಂಕೆ ಯಿರುವ ಮಂದಿಯ ಮನೆಗಳ ಮಕ್ಕಳನ್ನು ನಿಗಾದ ಅವಧಿ ಕಳೆದ ನಂತರವಷ್ಟೇ ಚುಚ್ಚಮದ್ದಿಗಾಗಿ ಕರೆತರಬೇಕು. ಆಸ್ಪತ್ರೆಗಳಿಗೆ ಅಗತ್ಯವಿಲ್ಲದೆ ಭೇಟಿ ನೀಡಕೂಡದು. ಒ.ಪಿ.ಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
     ಬೇಸಗೆ ಮಳೆಯ ಹಿನ್ನೆಲೆಯಲ್ಲಿ ಡೆಂಗೆಜ್ವರ ವಿವಿಧ ಪ್ರದೇಶಗಳಲ್ಲಿ ತಲೆದೊರುವ ಬೀತಿಯ ಹಿನ್ನೆಲೆಯಲ್ಲಿ ಆರೋಗ್ಯ ಜಾಗೃತಿ ಶುಚೀಕರಣ ಚಟುವಟಿಕೆ ಚುರುಕುಗೊಳಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries