HEALTH TIPS

ಕೋವಿಡ್ ನಿಯಂತ್ರಣ : ದೊಡ್ಡ ಕೊಡುಗೆಯಲ್ಲಿ ಆಶಾ ಕಾರ್ಯಕರ್ತರು

     ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ಜಗತ್ತಿಗೆ ಮಾದರಿಯಾಗಿರುವ ಕಾಸರಗೋಡು ಜಿಲ್ಲೆಯಲ್ಲಿ ಬಲುದೊಡ್ಡ ಯೋಗದಾನ ನೀಡುತ್ತಿರುವ ಆಶಾ ಕಾರ್ಯಕರ್ತರು ಸದ್ದಿಲ್ಲದೆ ಸಾಧನೆ ನಡೆಸುತ್ತಿದ್ದಾರೆ. ಸಮಾಜದ ತಳಹದಿಯಲ್ಲಿ ಜನತೆಯೊಂದಿಗೆ ನೇರವಾಗಿ ಸಂಪರ್ಕದಲ್ಲಿರುವ ಇವರು ಮನೆಗಳಲ್ಲಿ ನಿಗಾದಲ್ಲಿರುವ ಮಮದಿಗಳ ಮಾಹಿತಿ ಸಂಗ್ರಹ, ವಿದೇಶಗಳಿಂದ ಊರಿಗೆ ಮರಳಿದವರ ಮಾಹಿತಿ ಹಸ್ತಾಂತರ, ಚಿಕಿತ್ಸೆ ಅಗತ್ಯವಿರುವವರ ಪತ್ತೆ, ಇತರ ರೋಗಿಗಳ ಮನೆಗಳಿಗೆ ತೆರಳಿ ತಪಾಸಣೆ, ಔಷಧ ವಿತರಣೆ, ಮೈಗ್ರೆಂಟ್ ಸ್ಕ್ರೀನಿಂಗ್, ಜನಜಾಗೃತಿ ಹೀಗೆ ವಿವಿಧ ಚಟುವಟಿಕೆಗಳಲ್ಲಿ ಇವರು ತೊಡಗಿಕೊಂಡಿದ್ದಾರೆ.
     ಈ ಚಟುವಟಿಕೆಗಳಿಗೆ ಪ್ರತಫಲ ರೂಪದಲ್ಲಿ ಪ್ರತಿತಿಂಗಳು ಗೌರವಧನ ರೂಪದಲ್ಲಿ 4500 ರೂ. ವರೆಗೆ, ಶಾಶ್ವತ ಭತ್ಯೆ ರೂಪದಲ್ಲಿ 2 ಸಾವಿರ ರೂ. ವರೆಗೆ, ಇತರ ಚಟುವಟಿಕೆಗಳಿಗೆ ಅನುಸರಿಸಿ ಬೇರೆ ಭತ್ಯೆಗಳನ್ನು ನೀಡಲಾಗುತ್ತಿದೆ. ಜಿಲ್ಲಾ ಆಶಾ ಸಂಚಾಲಕ ಈ ಚಟುವಟಿಕೆಗಳನ್ನು ಪರಿಶೀಲಿಸಿ ಆಶಾ ಕಾರ್ಯರ್ತರಿಗೆ ಫ್ರತಿಫಲ ಲಭ್ಯತೆಯ ಖಚಿತತೆ ನಡೆಸುತ್ತಾರೆ.
     ಆರೋಗ್ಯ ವಲಯದ ಕಾರ್ಯಕರ್ತರ ಜೊತೆಗೆ ಆಶಾ ಕಾರ್ಯಕರ್ತರ ಸೇವೆಯೂ ಬಹಳ ದೊಡ್ಡದು ಮತ್ತು ಪ್ರಶಂಸನೀಯ. ಪ್ರತಿರೋಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಆಶಾ ಕಾರ್ಯಕರ್ತರಿಗೆ ಫೆಬ್ರವರಿ ತಿಂಗಳ ವರೆಗಿನ ಗೌರವಧನವನ್ನು ವಿತರಿಸಲಾಗಿದೆ ಎಂದು ಆರೋಗ್ಯ ಕೇರಳ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ.ರಾಮನ್ ಸ್ವಾತಿ ವಾಮನ್ ತಿಳಿಸಿದರು.                           

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries