ಕಾಸರಗೋಡು: ಮಳೆಗಾಲಕ್ಕೆ ಮುನ್ನ ಜಿಲೆಯಲ್ಲಿ ನಡೆಸಬೇಕಾದ ಶುಚೀಕರಣವನ್ನು ಯಥಾಸಮಯದಲ್ಲೇ ನಡೆಸಲು ಸಂಬಂಧಪಟ್ಟವರ ಸಭೆ ನಿರ್ಧರಿಸಿದೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ ತೀರ್ಮಾನ ಕೈಗೊಂಡಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅವರ ಸಮಕ್ಷದಲ್ಲಿ ಈ ಸಭೆ ನಡೆಯಿತು.
ಜಲಾಶಯಗಳನ್ನು ಶುಚೀಕರಣಗೊಳಿಸಲು, ಜನ ಹರಿವಿಕೆಯನ್ನು ಸುಗಮಗೊಳಿಸಲು ರಾಷ್ಟ್ರೀಯ ಗ್ರಾಮೀಣ ನೌಕರಿ ಖಾತರಿ ಯೋಜನೆಯ ಅಳವಡಿಕೆಯೊಂದಿಗೆ ಕ್ರಮಕೈಗೊಳ್ಳಲಾಗುವುದು. ಶುಚೀಕರಣ ಕಾರ್ಮಿಕರು ಮತ್ತು ಮಳೆಗಾಲ ಮುನ್ನ ಶುಚೀಕರಣ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳುವ ಕಾರ್ಮಿಕರು ಕೋವಿಡ್ ಪ್ರತಿರೋಧ ಸಂಬಂಧ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್, ಗ್ಲೌಸ್ ಧರಿಸಬೇಕು. ಒಂದೂವರೆ ಮೀಟರ್ ಸಾಮಾಜಿಕ ಅಂತರ ಪಾಲಿಸಬೇಕು. ಗ್ರಾಮಪಂಚಾಯತ್ ಗಳ ಮತ್ತು ನಗರಸಭೆಗಳ ನೇತೃತ್ವದಲ್ಲಿ ಶುಚೀಕರಣಗಳು ನಡೆಯಬೇಕು. ರೆಡ್ ಝೋನ್ ಆಗಿರುವ ಹಿನ್ನೆಲೆಯಲ್ಲಿ ನೌಕರಿ ಖಾತರಿ ವಲಯದಲ್ಲಿ ಕಾರ್ಮಕರಲ್ಲಿ ಶೇ 33 ಮಂದಿ ದಿನವೊಂದರಲ್ಲಿ ತೊಡಗಿಕೊಳ್ಳಬಹುದಾಗಿದೆ. ಮುಖ್ಯಮಂತ್ರಿ ಅವರ ಆದೇಶ ಪ್ರಕಾರ ಮಳೆಗಾಲಕ್ಕೆ ಮುನ್ನ ಶುಚೀಕರಣ ನಡೆಸನಡೆಸಲಾಗುವುದು. ಈ ಕಾಯಕದಲ್ಲಿ ತೊಡಗಿಕೊಂಡವರನ್ನು ಪೆÇಲೀಸರು ಯಾವ ಕಾರಣಕ್ಕೂ ತಡೆಯಕೂಡದು. ಈ ಸಂಬಂಧ ಗುರುತುಚೀಟಿ ಹೊಂದಿರುವ ಜನಪ್ರತಿನಿಧಿಗಳ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಮಗ್ರ ಕ್ರಿಯಾ ಯೋಜನೆ ಸಿದ್ಧಗೊಳಿಸಲು ಜಿಲ್ಲಾ ಶುಚಿತ್ವ ಮಿಷನ್ ಗೆ ಹೊಣೆ ನೀಡಲಾಗಿದೆ. ವೆಳ್ಳರಿಕುಂಡ್ ತಾಲೂಕಿನಲ್ಲಿ ಇಲಿಜ್ವರ ಈ ಹಿಂದೆ ಕಂಡುಬಂದ ಹಿನ್ನೆಲೆಯಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಸುವ ನಿಟ್ಟಿನಲ್ಲಿ ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಮತ್ತು ಪಂಚಾಯತ್ ಡೆಪ್ಯುಟಿ ಡೈರೆಕ್ಟರ್ ಗೆ ಹೊಣೆ ನೀಡಲಾಗಿದೆ. ಮೇ 15ರ ಮುಂಚಿತವಾಗಿ ಮಳೆಗಾಲಕ್ಕೆ ಮುನ್ನ ಶುಚೀಕರಣ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ನುಡಿದರು.
ಶುಚೀಕರಣ ಮತ್ತು ನೌಕರಿ ಖಾತರಿ ಯೋಜನೆ ಚಟುವಟಿಕೆಗಳಲ್ಲಿ 60 ವರ್ಷಕ್ಕಿಂತ ಅಧಿಕ ವಯೋಮಾನದವರನ್ನು, ಶೀತ, ಜ್ವರ, ಉಸಿರಾಟತೊಂದರೆ ಇರುವವರನ್ನು, ಸಿಹಿಮೂತ್ರ, ಹೃದ್ರೋಗ ಇತ್ಯಾದಿ ರೋಗಗಳಿರುವವರನ್ನು, 5 ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳಿರುವ ಹೆತ್ತವರನ್ನು ತೊಡಗಿಸಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
Àಗರಸಭೆ ಅಧ್ಯಕ್ಷರ ಛೇಂಬರ್ ಅಧ್ಯಕ್ಷ ವಿ.ವಿ.ರಮೇಶನ್, ಗ್ರಾಮಪಂಚಾಯತ್ ಅಸೋಸಿಯೇಶನ್ ಜಿಲ್ಲಾ ಸಮಿತಿ ಅಧ್ಯಕ್ಷ ಎ.ಎ.ಜಲೀಲ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ಶುಚಿತ್ವ ಮಿಷನ್ ಸಂಚಾಲಕಿ ಲಕ್ಷ್ಮಿ ಉಪಸ್ಥಿತರಿದ್ದರು.

