HEALTH TIPS

ವಾಟ್ಸ್ ಆಫ್ ಗುಂಪಿನಿಂದ ಕೊರೊನಾ ನೆರವು


          ಮಂಜೇಶ್ವರ: ಮಂಜೇಶ್ವರದ ಸ್ಕಂದ ಕೊರೊನಾ ಹೆಲ್ಪ್ ಡೆಸ್ಕ್ ವಾಟ್ಸ್ ಆಫ್ ಗ್ರೂಪ್ ನ ಸದಸ್ಯರ ನೆರವಿನಿಂದ ಮಂಜೇಶ್ವರ, ಮಿಂಜ, ವರ್ಕಾಡಿ ಪಂಚಾಯತಿ ವ್ಯಾಪ್ತಿಯ ಆಯ್ದ ಕಡು ಬಡ ಕುಟುಂಬಗಳಿಗೆ ನೀಡುವ ನಿತ್ಯೋಪಯೋಗಿ ಆಹಾರ ವಸ್ತುಗಳ ಕಿಟ್ ನ್ನು ನೀಡಲು ನಿರ್ಧರಿಸಿದ್ದು, ಇದರಂತೆ ಮಂಜೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಯ್ದ 38 ಕಡು ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನೊಳಗೊಂಡ ಕಿಟ್ ವಿತರಣೆಗೆ ಸೋಮವಾರ ಅಪರಾಹ್ನ ಹೊಸಂಗಡಿ ಪೇಟೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜೇಶ್ವರ ಪೆÇಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರಾಜು ಅವರು  ಚಾಲನೆ ನೀಡಿದರು.
          ಈ ಸಂದರ್ಭ ಲಾಕ್ ಡೌನ್ ನಿಮ್ಮಿತ್ತ ಹೊಸಂಗಡಿ ಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿವಿಲ್ ಪೋಲೀಸ್ ಅಧಿಕಾರಿ ವಿನಿತ್, ಶನೀಶ್, ಹೋಮ್ ಗಾರ್ಡ್‍ನ  ಶಶಿಧರನ್, ಸ್ಕಂದ ಕೊರೊನಾ ಹೆಲ್ಪ್ ಡೆಸ್ಕ್ ನ ಪ್ರಧಾನ ಸಂಚಾಲಕ ರತನ್ ಕುಮಾರ್ ಹೊಸಂಗಡಿ, ಸುಕೇಶ್ ಬೆಜ್ಜ, ತುಳಸಿದಾಸ್ ಮಂಜೇಶ್ವರ,  ಜನಾರ್ದನ ಆಚಾರ್ಯ ಮಜಿಬೈಲ್,  ಉದಯ ಪೆÇಸೋಟ್ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಮಂಜೇಶ್ವರ ಪಂಚಾಯತಿ ವ್ಯಾಪ್ತಿಯ ಆಯ್ದ 38 ಬಡ ಕುಟುಂಬಗಳಿಗೆ ಕಿಟ್ ನ್ನು ನೇರ ಮನೆಗೆ ತೆರಳಿ ವಿತರಿಸಲಾಯಿತು. ಈ ವೇಳೆ ಸ್ಥಳೀಯ ಪ್ರಮುಖರಾದ  ಉದಯ ಶೆಟ್ಟಿ ಹೊಸಬೆಟ್ಟು, ಹರೀಶ್ ಬಡಾಜೆ, ಯಶ್‍ಪಾಲ್ ಉದ್ಯಾವರ ಮತ್ತು ವಾಟ್ಸ್ ಆಫ್  ತಂಡದ ಸದಸ್ಯರು, ಹಾಗೂ  ಹರಿಣಾಕ್ಷಿ ದಾಮೋದರ ಶೆಟ್ಟಿ ಕುಂಜತ್ತೂರು, ಶೋಭಾ ವಿ. ಶೆಟ್ಟಿ ಕುಂಜತ್ತೂರು ಮಹಾಲಿಂಗೇಶ್ವರ, ವೆಂಕಪ್ಪ ಶೆಟ್ಟಿ ಕುಂಜತ್ತೂರು ಮಜಾಲ್ ಉಪಸ್ಥಿತರಿದ್ದು ಫಲಾನುಭವಿಗಳ ಮನೆಗೆ ತೆರಳಿ ವಿತರಿಸಿದ ನಿಯೋಗದಲ್ಲಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries