ಪೆರ್ಲ: ಇಡೀ ವಿಶ್ವ ಕೊರೊನಾ ವೈರಸ್‍ನಿಂದ ಕಂಗೆಟ್ಟರೆ, ಕೇರಳದ ಕಾಸರಗೋಡು ಜಿಲ್ಲೆ ಮಾತ್ರ, ಕೋವಿಡ್-19 ಸೋಂಕು ಇಲ್ಲದೇ ಇರುವವರೂ ಸಾವಿಗೆ ದವಡೆಯತ್ತ ಸಾಗುತ್ತಿದ್ದಾರೆ. ಇದೀಗ ಯುವ ಸಮುದಾಯ ಗಡಿನಾಡ ಜನರ ಜೀವ ಉಳಿಸುವಂತೆ ಕೇಂದ್ರ ಸರಕಾರದ ಕದ ತಟ್ಟಿದೆ. ತಕ್ಷಣವೇ ಸೂಕ್ತ ವೈದ್ಯಕೀಯ ಸವಲತ್ತುಗಳನ್ನು ಕಾಸರಗೋಡಿನಲ್ಲೇ ಒದಗಿಸಲು ಒಕ್ಕೊರಲ ಮನವಿ ಮಾಡಿದ್ದಾರೆ.
ಕೇರಳ - ಕರ್ನಾಟಕ ಎಲ್ಲ ರಸ್ತೆಯನ್ನು ಮುಚ್ಚಿರುವುದು. ಭೌಗೋಳಿಕವಾಗಿ ಕೇರಳಕ್ಕೆ ಸೇರುವ ಗಡಿನಾಡು ಕಾಸರಗೋಡು ಜಿಲ್ಲೆ, ವೈದ್ಯಕೀಯ, ಆರ್ಥಿಕ, ಸಾಂಸ್ಕøತಿಕ ಹಾಗೂ ಸಾಮಾಜಿಕವಾಗಿ ಕರ್ನಾಟಕದ ಭಾಗವೇ ಆಗಿದೆ. ಆದರೆ ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಉಭಯ ರಾಜ್ಯಗಳ ನಡುವಿನ ರಸ್ತೆ ಸಂಪರ್ಕವನ್ನು ಸಂಪೂರ್ಣವಾಗಿ ಮುಚ್ಚಿರುವುದು, ಅಗತ್ಯ ಚಿಕಿತ್ಸೆಗೆ ಮಂಗಳೂರಿಗೆ ತೆರಳಲಾರದೆ ಕಳೆದೆರಡು ವಾರಗಳಲ್ಲಿ 7 ಮಂದಿಯ ಪ್ರಾಣ ಕಸಿದುಕೊಂಡಿದೆ.
ಸೇವ್ ಮೈ ಡಿಸ್ಟ್ರಿಕ್ಟ್, ಸೇವ್ ಮೈ ಪೀಪಲ್ ಹ್ಯಾಶ್ ಟ್ಯಾಗ್:
ಕಾಸರಗೋಡಿನಲ್ಲಿ ಅತ್ಯುತ್ತಮ ವೈದ್ಯಕೀಯ ಸವಲತ್ತುಗಳಿಲ್ಲ. ಅರವತ್ತು ಕಿ.ಮೀ ಆಸುಪಾಸಿನಲ್ಲಿರುವ ಮಂಗಳೂರೇ ಗಡಿನಾಡಿಗರ ಕೇಂದ್ರ. ರಸ್ತೆ ಸಂಪರ್ಕ ಸಂಪೂರ್ಣ ಮುಚ್ಚಿರುವುದು ಸಾಮಾನ್ಯ ಜನರ ಪ್ರಾಣಕ್ಕೇ ಸಂಚುಕಾರ ತಂದೊಡ್ಡಿದೆ. ಮುಖ್ಯವಾಗಿ ಜಿಲ್ಲೆಯಲ್ಲಿ ವೈದ್ಯಕೀಯ ಸವಲತ್ತುಗಳಿಗೆ ಕೊರತೆ ಎದುರಾಗಿದ್ದು, ಸೂಕ್ತ ರೀತಿಯಲ್ಲಿ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಮಧ್ಯಪ್ರವೇಶಿಸಿ, ಕೇರಳದ ಗಡಿನಾಡ ಜಿಲ್ಲೆ ಕಾಸರಗೋಡು ಭಾಗದಲ್ಲಿ ಸೂಕ್ತ ವೈದ್ಯಕೀಯ ನೆರವು ಸಿಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ಟ್ವಿಟರ್‍ನಲ್ಲೂ ಸೇವ್ ಮೈ ಡಿಸ್ಟ್ರಿಕ್ಟ್, ಸೇವ್ ಮೈ ಪೀಪಲ್ ಹ್ಯಾಶ್ ಟ್ಯಾಗ್ ನಲ್ಲಿ ಅಭಿಯಾನ ಆರಂಭಿಸಲಾಗಿದೆ. ಪೆರ್ಲದ ಯುವ ಪತ್ರಕರ್ತೆ ಅಂಬಿಕಾ ಕೈಲಾಸ್ ಮೊದಲು ಈ ಟೀಟ್ ಸಮರಕ್ಕೆ ಚಾಲನೆ ನೀಡಿದರು.
ಒಂದೆಡೆ ಕಾಸರಗೋಡು, ರಾಜ್ಯದಲ್ಲೇ ಅತ್ಯಧಿಕ ಕೋವಿಡ್-19 ಸೋಂಕಿತರನ್ನು ಹೊಂದಿರುವ ಜಿಲ್ಲೆಯಾಗಿ ಮಾರ್ಪಾಟಾಗಿದೆ. ಜಿಲ್ಲಾ ಆರೋಗ್ಯ ಕೇಂದ್ರ ಐಸೋಲೇಷನ್ ಮಾಡಲಾಗಿದೆ. ಇತರೆ ತುರ್ತು ವೈದ್ಯಕೀಯ ಅವಶ್ಯಕತೆಗಳಿಗೆ ಮಂಗಳೂರಿಗೆ ತೆರಳುವುದು ಅನಿವಾರ್ಯ. ಆದರೆ ಕರ್ನಾಟಕ - ಕೇರಳ ನಡುವಿನ ಎಲ್ಲ ರಸ್ತೆ ಮಾರ್ಗವನ್ನು ಮುಚ್ಚಿದ್ದರಿಂದ ತುರ್ತು ವೈದ್ಯಕೀಯ ಸೇವೆ ಲಭ್ಯವಾಗದೇ, 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೃದ್ರೋಗಿಯೊಬ್ಬರು ದಾರಿ ಮಧ್ಯ ಅಸುನೀಗಿದ ಘಟನೆಯೂ ನಡೆದಿದೆ. ಇದಕ್ಕೆ ಕಾರಣ ಅಂಬ್ಯುಲೆನ್ಸ್ ಗೂ ಗಡಿ ದಾಟಲು ಅವಕಾಶ ನೀಡದೇ ಇದ್ದುದು! ಜೀವ ಉಳಿಸಿಕೊಳ್ಳಲು ನಾವು ಯಾವ ದಾರಿ ಹಿಡಿಯುವುದು ಸೂಕ್ತ ಲಾಕ್‍ಡೌನ್ ಸಮಯದಲ್ಲಿ ಇನ್ನೂ ಎಷ್ಟು ಮಂದಿ ವೈದ್ಯಕೀಯ ಸೇವೆ ಅಲಭ್ಯವಾಗಿ ಜೀವ ಕಳೆದುಕೊಳ್ಳಬೇಕು? ಎಂದು ಯುವ ಜನಾಂಗ ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಕೇಳಿದ್ದಾರೆ.
ಕೇಂದ್ರಾಡಳಿತ ಪ್ರದೇಶವನ್ನಾಗಿಸಿ:
ಭೌಗೋಳಿಕವಾಗಿ ಮಾತ್ರವೇ ಕಾಸರಗೋಡು ಕೇರಳಕ್ಕೆ ಸೇರಿದೆ. ಸಾಂಸ್ಕೃತಿಕವಾಗಿ ದಕ್ಷಿಣ ಕನ್ನಡದ ಜತೆ ಕಾಸರಗೋಡು ಬೆರೆತಿದೆ. ಆರೋಗ್ಯ ಸೇವೆ, ಶಿಕ್ಷಣ ಹಾಗೂ ಇತರೆ ದೈನಂದಿನ ವಹಿವಾಟುಗಳಿಗೆ ಕಾಸರಗೋಡು ಅವಲಂಬಿಸಿರುವುದು ಮಂಗಳೂರು ಹಾಗೂ ಸುತ್ತಮುತ್ತಲ ದಕ್ಷಿಣ ಕನ್ನಡದ ಪಟ್ಟಣಗಳನ್ನೇ! ಕಳೆದ 60 ದಶಕದಿಂದಲೂ ಕೇರಳ ಗಡಿನಾಡ ಜಿಲ್ಲೆಯ ಮನಸ್ಥಿತಿ, ಅಲ್ಲಿನ ಜನರ ಅವಶ್ಯಕತೆಯನ್ನು ತಿಳಿಯುಲು ಬಯಸಿದ್ದೇ ಇಲ್ಲ. ಇಲ್ಲಿ ಜನರಿಗೆ ಅಗತ್ಯ ಮೂಲಸೌಕರ್ಯವನ್ನು ಒದಗಿಸುವ ಪ್ರಯತ್ನವನ್ನೂ ಮಾಡಿಲ್ಲ.
ಹೀಗಾಗಿಯೇ ಕೇರಳಕ್ಕೆ ಬೇಡವಾದ ಕಾಸರಗೋಡು ಜಿಲ್ಲೆಯಲ್ಲಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಿ. ನಮ್ಮ ರಕ್ಷಣೆಯ ಜವಾಬ್ದಾರಿ ಕೇಂದ್ರ ಸರಕಾರವೇ ನೋಡಿಕೊಳ್ಳಲಿ. ಕೋವಿಡ್-19 ಸೇರಿದಂತೆ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವರಿಗೆ ಕನಿಷ್ಠ ಸಮಯದಲ್ಲಿ ತುರ್ತು ಆರೋಗ್ಯ ಸೇವೆ ಲಭ್ಯವಾಗುಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ತುರ್ತು ಕ್ರಮ ಕೈಗೊಂಡು ಗಡಿನಾಡಿನಗರ ಜೀವ ಉಳಿಸುವಂತೆ ಟ್ವಿಟರ್ ಮೂಲಕ ಪತ್ರ ಬರೆದು ಮನವಿ ಮಾಡಲಾಗಿದೆ. ಜತೆಗೆ ಸೇವ್‍ಮೈ ಡಿಸ್ಟ್ರಿಕ್ಟ್, ಸೇವ್ ಮೈ ಪೀಪಲ್ ಹ್ಯಾಶ್‍ಟ್ಯಾಗ್ ಮೂಲಕ ಸಾಮಾಜಿಕ ಅಭಿಯಾನ ಆರಂಭಿಸಲಾಗಿದೆ.https://twitter.com/


