HEALTH TIPS

ಗಡಿ ಪ್ರದೇಶಗಳಲ್ಲಿ ಕನ್ಸ್ಯೂಮರ್ ಸ್ಟೋರ್‍ಗಳ ಆರಂಭ


            ಮಂಜೇಶ್ವರ/ಪೆರ್ಲ: ಜಿಲ್ಲೆಯಲ್ಲಿ ಗಡಿ ಪ್ರದೇಶಗಳ ಬಳಿ ಸಹಕಾರಿ ಸಂಘಗಳ ನೇತೃತ್ವದಲ್ಲಿ ಕನ್ಸ್ಯೂಮರ್ ಸ್ಟೋರ್‍ಗಳನ್ನು ಶನಿವಾರದಿಂದ ಆರಂಭಿಸಲಾಯಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಆದೇಶ ಪ್ರಕಾರ ಈ ಕ್ರಮ ಜಾರಿಗೊಂಡಿದೆ. ದಿನಸಿ ಅಂಗಡಿ ಮತ್ತು ಔಷಧದ ಅಂಗಡಿ ಈ ನಿಟ್ಟಿನಲ್ಲಿ ಆರಂಭಗೊಂಡಿತು. ಮೊದಲ ಹಂತದಲ್ಲಿ ಅನಿವಾರ್ಯ ಸಾಮಾಗ್ರಿಗಳು ಇಲ್ಲಿ ದೊರೆಯಲಿವೆ. ಗಡಿ ದಾಟದೇ ಜನತೆಗೆ ಅಗತ್ಯದ ಸಾಮಾಗ್ರಿ, ಔಷಧ ಈ ಮೂಲಕ ಲಭಿಸಲಿದೆ.
      ಒಟ್ಟು 10 ಸ್ಥಳಗಳಲ್ಲಿ ಈ ಸಹಕಾರಿ ಅಂಗಡಿಗಳು ಆರಂಭಗೊಂಡಿತು. ತಲಪ್ಪಾಡಿ ರಾಷ್ಟ್ರೀಯ ಹೆದ್ದಾರಿಯ ತೂಮಿನಾಡು ರಸ್ತೆಯಲ್ಲಿ ಕುಂಜತ್ತೂರು-ಮಂಜೇಶ್ವರ ಸಹಕಾರಿ ಬ್ಯಾಂಕ್, ಅಡ್ಕಸ್ಥಳ ರಸ್ತೆಯಲ್ಲಿ ಅಡ್ಕಸ್ಥಳ-ಪೆರ್ಲ ಬ್ಯಾಂಕ್, ಸ್ವರ್ಗ ಆರ್ಲಡ್ಕ ರಸ್ತೆಯಲ್ಲಿ, ಪೈವಳಿಕೆ (ಹೋಂ ಡೆಲಿವರಿ)-ಪೈವಳಿಕೆ ಬ್ಯಾಂಕ್, ಬೆರಿಪದವು ರಸ್ತೆಯಲ್ಲಿ ಬೆರಿಪದವು-ಬಾಯಾರು ಸಹಕಾರಿ ಬ್ಯಾಂಕ್, ಆದೂರು ಕೊಟ್ಯಾಡಿ, ಪಳ್ಳತ್ತೂರು, ಈಶ್ವರ ಮಂಗಲ ರಸ್ತೆಯಲ್ಲಿ ಪಿಡಿಯತ್ತಡ್ಕ-ಕಾಡಗಂ ಎಸ್.ಸಿ.ಬಿ., ನಾಟೆಕಲ್ಲು ಸುಳ್ಯಪದವು ರಸ್ತೆಯಲ್ಲಿ ಕಾಡಗಂ ಅಗ್ರಿ ಕಲ್ಚರಿಸ್ಟ್ ಸಹಕಾರಿ ಸಂಘ, ಮಾಣಿಮೂಲೆ ಉಳ್ಯ ರಸ್ತೆಯಲ್ಲಿ ಕುತ್ತಿಕೋಲ್ ಅಗ್ರಿ ಸಹಕಾರಿ ಸಂಘ, ಆದೂರು-ಕೊಟ್ಯಾಡಿ-ಸುಳ್ಯ ರಸ್ತೆಯಲ್ಲಿ ದೇಲಂಪಾಡಿ ಅಗ್ರಿ ಸಹಕಾರಿ ಸಂಘ. ಗಾಳಿಮುಖ, ಈಶ್ವರಮಂಗಲ ದೇಲಂಪಾಡಿ ರಸ್ತೆಯಲ್ಲಿ ದೇಲಂಪಾಡಿ ಅಗ್ರಿ ಸಹಕಾರಿ ಬ್ಯಾಂಕ್ ಗಳಲ್ಲಿ ಈ ಕೇಂದ್ರಗಳು ಆರಂಭಗ್ಯೆಂಡಿತು. ಸಾಮಾಗ್ರಿಗಳ ರವಾನೆಗೆ 2 ಲಾರಿಗಳನ್ನು ಜಿಲ್ಲಾಧಿಕಾರಿ ಮಂಜೂರಾತಿ ನೀಡಿದ್ದಾರೆ. ಅಕ್ಕಿ,ಬೇಳೆ, ಸಕ್ಕರೆ ಸಹಿತ ಸಾಮಾಗ್ರಿಗಳು ಇಲ್ಲಿ ಲಭಿಸಲಿವೆ. ಗಡಿಭಾಗಗಳಲ್ಲಿ ಪುಟ್ಟ ಪೇಟೆಗಳನ್ನು ನಿರ್ಮಿಸುವುದು ಇಲ್ಲಿನ ಉದ್ದೇಶ. ಈ ನಿಟ್ಟಿನಲ್ಲಿ ವ್ಯಾಪಾರಿ ವ್ಯವಸಾಯಿ ಸಂಘಟನೆಗಳ ಜೊತೆ ಜಿಲ್ಲಾಧಿಕಾರಿ ಮಾತುಕತೆ ನಡೆಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries