ಕುಂಬಳೆ: ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟಕ್ಕೆ ಸಮಗ್ರ ದೇಶದ ಮನೆ ಮನೆಗಳಲ್ಲೂ ದೀಪ ಬೆಳಗಲು ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯಂತೆ ಕಾಸರಗೋಡು ಜಿಲ್ಲೆಯಾದ್ಯಂತ ಬಹುತೇಕ ಮನೆ, ಮಂದಿರಗಳಲ್ಲಿ, ದೇವಸ್ಥಾನಗಳಲ್ಲಿ ಎ.9 ರಂದು ರಾತ್ರಿ 9 ಗಂಟೆಯಿಂದ 9 ನಿಮಿಷಗಳ ಕಾಲ ಹಣತೆ, ಮೋಂಬತ್ತಿ ಮೊದಲಾದವುಗಳನ್ನು ಬೆಳಗಿಸಿದರು.
ಕೊರೊನಾ ವೈರಾಣು ಉಂಟು ಮಾಡಿದ ಕಗ್ಗತ್ತಲೆಯನ್ನು ತೊಡೆದು ಹಾಕುವ ಮಹಾ ಸಂಕಲ್ಪವನ್ನು ತೊಟ್ಟ ನಾಡಿನ ಜನರು ದೀಪವನ್ನು ಬೆಳಗಿ ಕೊರೊನಾ ವಿರುದ್ಧದ ಹೋರಾಟದಲ್ಲಿ ತಮ್ಮ ಪೂರ್ಣ ಬೆಂಬಲವನ್ನು ಸಾರಿದರು. ಮನೆಯ ಬಾಗಿಲಿನಲ್ಲಿ, ಟೆರೇಸ್‍ನಲ್ಲಿ, ಫ್ಲ್ಯಾಟ್‍ಗಳ ಬಾಲ್ಕನಿಯಲ್ಲಿ ಹಣತೆ, ಮೋಂಬತ್ತಿ, ಟಾರ್ಚ್, ಮೊಬೈಲ್ ಲೈಟ್ ಮೊದಲಾದವುಗಳನ್ನು ಬೆಳಗಿದರು.
(ಚಿತ್ರ ಮಾಹಿತಿ: a)(b)ಸುರೇಶ್ ವಾಣೀನಗರ ಅವರ ಮನೆಯಲ್ಲಿ ಮೋಡಿ ಮಾಡಿದ ಹಣತೆ.)
(1)(2)ಪೆರ್ಲ ಸಮೀಪದ ಕಾಟುಕುಕ್ಕೆ ಕುಮಾರಕೊಚ್ಚಿಯ ಸುಭಾಷ್ ಅವರ ಮನೆಯಲ್ಲಿ ಹಣತೆ ಬೆಳಗಿರುವುದು,3)ಪೆರ್ಲದ ನಲ್ಕ ಎಂಬಲ್ಲಿ ವ್ಯಾಪಾರಿಯಾಗಿರುವ ಅಂಬಾಚು ಎಂಬವರು ಮನೆಯಲ್ಲಿ ಮೋಮಬತ್ತಿ ದೀಪ ಬೆಳಗಿಸುತ್ತಿರುವುದು,4)ನೀರ್ಚಾಲು ಸಮೀಪದ ಪುದುಕೋಳಿಯ ತಿಲಕ್ ರಾಜ್ ತಮ್ಮ ಮನೆಯ ಆವರಣದಲ್ಲಿ ಮೋಂಬತ್ತಿ ಉರಿಸಿರುವುದು,5)(6)ನೆಟ್ಟಣಿಗೆಯ ಶ್ರೀಕಾಂತ್ ಅವರ ಮನೆಯಲ್ಲಿ ಬೆಳಗಿದ ಹಣತೆ)






