ಮುಳ್ಳೇರಿಯ: ಕೋವಿಡ್ 19 ತುರ್ತು ಸಂದರ್ಭದಲ್ಲಿ ಅನ್ಯ ರಾಜ್ಯ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಅನ್ಯರಾಜ್ಯ ಕಾರ್ಮಿಕರ ಹಸಿವು ನಿವಾರಣೆಗೆ ಆದೂರು ಪೋಲೀಸ್ ಠಾಣಾ ಜನಮೈತ್ರಿ ಪೋಲೀಸ್ ವತಿಯಿಂದ ಆಹಾರ ಧವನ ಧಾನ್ಯಗಳ ವಿತರಣೆ ನಡೆಯಿತು.
ಸಮಾರಂಭದಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬೋವಿಕ್ಕಾನ ಘಟಕಾಧ್ಯಕ್ಷ ಮೊಹಮ್ಮದ್ ಮುಳಿಯಾರ್ ಅವರು ಆದೂರು ಠಾಣಾಧಿಕಾರಿ ಮುಕುಂದನ್ ಅವರಿಗೆ ಮೊದಲ ಕಿಟ್ ವಿತರಿಸಿ ಉದ್ಘಾಟಿಸಿದರು. ಠಾಣಾ ಸಹ ಅಧಿಕಾರಿಗಳಾದ ರಾಧಾಕೃಷ್ಣನ್, ಪೋಲೀಸರಾದ ನಂದನ್, ರಾಜನ್, ಇಸ್ಮಾಯಿಲ್, ಶಿಜಾ, ರಾಜೇಶ್, ಜನಮೈತ್ರಿ ಪೋಲೀಸ್ ಅಧಿಕಾರಿ ವಿನೀಶ್, ರತೀಶ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬೋವಿಕ್ಕಾನ ಘಟಕದ ಕಾರ್ಯದರ್ಶಿ ಮುಸ್ತಫಾ ಬಿಸ್ಮಿಲ್ಲ, ಉಪಾಧ್ಯಕ್ಷ ನಾರಾಯಣನ್ ಜಿಲ್ಲಾ ಸಮಿತಿ ಸದಸ್ಯ ಹಂಸ ಮೊದಲಾದವರು ಉಪಸ್ಥಿತರಿದ್ದರು.


