ನವದೆಹಲಿ: ಕೊರೊನಾ ವೈರಸ್ ಆತಂಕದಲ್ಲಿ ಲಾಕ್ಡೌನ್ ಆಗಿರುವ ರಾಜಧಾನಿ ದೆಹಲಿಯಲ್ಲಿ ಭಾನುವಾರ ಸಂಜೆ ಭೂಕಂಪನ ಸಂಭವಿಸಿದೆ.
ಭೂಕಂಪದ ತೀವ್ರತೆ ಹೆಚ್ಚಿಲ್ಲದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.5ಎಂದು ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ಪೂರ್ವ ದೆಹಲಿಯಲ್ಲಿ ಕಂಡು ಬಂದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿ ಹಾಗೂ ರಾಷ್ಟ್ರಯ ರಾಜಧಾನಿ ಪ್ರದೇಶ (ಎನ್ ಸಿ ಆರ್) ಗಳಲ್ಲಿ ಭೂಕಂಪದ ಅನುಭವಾಗಿದೆ. ನೋಯ್ಡಾ, ಗಾಜಿಯಾಬಾದ್, ಫರಿದಾಬಾದ್, ಗುರುಗ್ರಾಮದಲ್ಲಿ ಹೆಚ್ಚಿನ ಅನುಭವವಾಗಿದೆ. ಭಾನುವಾರ ಸಂಜೆ 5.45ರ ಸುಮಾರಿಗೆ ಕಂಪನವಾಗಿದೆ. ದೆಹಲಿಯಲ್ಲಿ ಕಂಪನದ ಅನುಭವವಾಗಿದೆ. ಎಲ್ಲರೂ ಕ್ಷೇಮವಾಗಿದ್ದೀರಾ ಎಂದು ಭಾವಿಸುತ್ತೇನೆ. ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.
"ನಾವು ಮನೆಯಲ್ಲಿ ಟಿವಿ ನೋಡುತ್ತಿದ್ದೆವು, ಇದ್ದಕ್ಕಿದ್ದಂತೆ ವಸ್ತುಗಳೆಲ್ಲ ಅಲುಗಾಡಿದಂತೆ ಕಾಣಿಸಿತು. ಮನೆಯಿಂದ ಎಲ್ಲರೂ ಹೊರಗಡೆ ಬಂದೆವು. ಹೊರಗಡೆ ನಮ್ಮಂತೆ ಅನೇಕ ಮಂದಿ ಹೊರಬಂದಿದ್ದರು. ನಂತರ ಭೂಕಂಪದ ಅನುಭವವನ್ನು ಇತರರೊಡನೆ ಹಂಚಿಕೊಂಡೆವು" ಎಂದು ಲಾಜ್ ಪತ್ ನಗರದ ನಿವಾಸಿಯೋರ್ವರು ಹೇಳಿದ್ದಾರೆ.
Tremors felt in Delhi. Hope everyone is safe. I pray for the safety of each one of you.
2,293 ಜನರು ಈ ಕುರಿತು ಮಾತನಾಡುತ್ತಿದ್ದಾರೆ



