ಉಪ್ಪಳ: ಕರ್ನಾಟಕ ಗಡಿಯನ್ನು ಬಂದ್ ಮಾಡುವ ಬರದಲ್ಲಿ ಕರ್ನಾಟಕ ಪೆÇಲೀಸರು ಕೇರಳದ ಪೈವಳಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಡಪದವು ಸಮೀಪದ ಕಾಡೂರು ಎಂಬಲ್ಲಿ ಮಣ್ಣನ್ನು ಅಗೆದು ರಾಶಿ ಹಾಕಿರುವುದನ್ನು ಕಾಸರಗೋಡು ಜಿಲ್ಲಾಧಿಕಾರಿಯವರ ಅದೇಶದಂತೆ ಕರ್ನಾಟಕ ಪೆÇಲೀಸರು ರಸ್ತೆಯಲ್ಲಿನ ಮಣ್ಣು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟ ಘಟನೆ ಇತ್ತೀಚೆಗೆ ನಡೆದಿದೆ.
ಕೇರಳ ರಸ್ತೆಯಲ್ಲಿ ಮಣ್ಣು ಹಾಕಿರುದರಿಂದ ಕೇರಳಕ್ಕೆ ಸಂಬಂಧಿಸಿದಂತೆ ಹಲವು ಮನೆಗಳಿಗೆ ತೊಂದರೆಯಾಗಿತ್ತು. ಇದನ್ನು ಇಲ್ಲಿನ ಸುಂಕದಕಟ್ಟೆಯ ಯುವಕರು ಕಾಸರಗೋಡು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರು. ಈ ನಿಟ್ಟಿನಲ್ಲಿ ವಿಟ್ಲ ಠಾಣಾಧಿಕಾರಿ ವಿನೋದ್ ರೆಡ್ಡಿ ಖುದ್ದು ತಪೆÇ್ಪಪ್ಪಿಕೊಂಡದಲ್ಲದೇ ಅವರೇ ಮುಂದೆ ನಿಂತು ಮಣ್ಣನ್ನು ತೆರವುಗೊಳಿಸಿದ್ದಾರೆ. ಅಲ್ಲದೆ ರಸ್ತೆ ಅಗೆದು ಹಾಕುವ ಸಂದರ್ಭದಲ್ಲಿ ಕೇರಳ ಸರ್ಕಾರದ ಜಲ ನಿಧಿಗೆ ಸಂಬಂಧಿಸಿದ ಪೈಪ್‍ಲೈನ್ ತುಂಡರಿಸಲ್ಪಟ್ಟಿದ್ದು, ಅದನ್ನು ವಿಟ್ಲ ಠಾಣಾಧಿಕಾರಿಗಳು ಶೀಘ್ರ ದುರಸ್ಥಿಗೊಳಿಸಿ ಕೊಡುವ ಭರವಸೆ ನೀಡಿದ್ದಾರೆ.
ಕರ್ನಾಟಕ ಪೆÇಲೀಸರು ಗಡಿ ಭಾಗಗಳನ್ನು ಮುಚ್ಚುಗಡೆಗೊಳಿಸುವಲ್ಲಿ ಸೂಕ್ತವಾದ ಮಾಹಿತಿ ಇಲ್ಲದೆ ಎಡವುತ್ತಿರುವುದು ಇದು ಮೊದಲೇನಲ್ಲ. ಅಲ್ಪ ದಿನಗಳ ಮೊದಲು ವರ್ಕಾಡಿಯಲ್ಲೂ ಇಂತಹದೇ ಘಟನೆ ಸಂಭವಿಸಿ ಜಿಲ್ಲಾ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿಯವರು ಧ್ವನಿ ಎತ್ತಿ ಅವರೇ ಖುದ್ದು ನಿಂತು ಮಣ್ಣನ್ನು ತೆಗಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.


