ಕಾಸರಗೋಡು: ವಿವಿಧ ರಾಜ್ಯಗಳಿಂದ ಮಂಜೇಶ್ವರ ಚೆಕ್ ಪೆÇೀಸ್ಟ್ ಮೂಲಕ ಈ ವರೆಗೆ 3206 ಮಂದಿ ಕೇರಳ ಪ್ರವೇಶ ಮಾಡಿದ್ದಾರೆ. ಪಾಸ್ ಗೆ ಅರ್ಜಿ ಸಲ್ಲಿಸಿದ್ದ 14,585 ಮಂದಿಯಲ್ಲಿ 8161 ಮಂದಿಗೆ ಪ್ರವೇಶಾತಿ ನೀಡಲಾಗಿದೆ. ಶುಕ್ರವಾರ (ಮೇ 8ರಂದು) ಮಾತ್ರ 383 ಮಂದಿ ಮಂಜೇಶ್ವರ ಮೂಲಕ ರಾಜ್ಯಕ್ಕೆ ಆಗಮಿಸಿದ್ದಾರೆ.
ಇದೇ ವೇಳೆ ರಾಜ್ಯದ ಇತರ ಗಡಿಗಳ ಮೂಲಕ 1061 ಮಂದಿ ಈ ವರೆಗೆ ಮೂಲನಿವಾಸಿಗಳು ಕಾಸರಗೋಡು ಜಿಲ್ಲೆ ಪ್ರವೇಶ ಮಾಡಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿ ಒಟ್ಟು 3894 ಪಾಸ್ ಗೆ ಅರ್ಜಿ ಸಲ್ಲಿಸಿದವರಲ್ಲಿ 2770 ಮಂದಿಗೆ ಪ್ರವೇಶಾತಿ ನೀಡಲಾಗಿದೆ.




