ಕೊಚ್ಚಿ: ಕೋವಿಡ್ ಹಿನ್ನೆಲೆಯಲ್ಲಿ ವಿದೇಶದಲ್ಲಿ ಸಿಲುಕಿಕೊಂಡಿದ್ದ ಜನರನ್ನು ಕರೆತರುವ ಭಾಗವಾಗಿ ಗುರುವಾರ ರಾತ್ರಿ ಅಬುದಾಬಿಯಿಂದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದ 181 ಮಂದಿ ಪ್ರಯಾಣಿಕರಿದ್ದ ವಿಮಾನದಲ್ಲಿದ್ದ ಐವರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ ಎಂಬ ಆತಂಕಕಾರಿ ವಿಷಯ ಇದೀಗ ಬಹಿರಂಗಗೊಂಡಿದೆ.
ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಪರಿಶೋಧನೆ ನಡೆಸಿದಾಗ ಐವರಲ್ಲಿ ರೋಗ ಲಕ್ಷಣ ಕಂಡುಬಂದಿದ್ದುಅವರನ್ನು ಆಲುವಾ ಜಿಲ್ಲಾಸ್ಪತ್ರೆಯ ಐಸೋಲೇಶನ್ ಗೆ ಕರೆದೊಯ್ಯಲಾಯಿತು. ಜೊತೆಗೆ ಅಬುದಾಬಿಯಿಂದ ಬಂದ ಪ್ರಯಾಣಿಕರೊಬ್ಬರು ಅಸ್ವಸ್ಥರಾಗಿದ್ದು ಎರ್ನಾಕುಳಂ ಜಿಲ್ಲಾಡಳಿತ ಕ್ವಾರಂಟೈನ್ ಗೆ ಕರೆದೊಯ್ಯಲಾಯಿತೆಂದು ಮೂಲಗಳಿಂದ ತಿಳಿದುಬಂದಿದೆ.





