ಸಂಜೆ 4 ಗಂಟೆಗೆ ಆರಂಭವಾದ ಬುಕ್ಕಿಂಗ್ ರಾತ್ರಿ 9.15ರ ವೇಳೆಗೆ ದೇಶಾದ್ಯಂತ 54,000 ಮಂದಿ ಪ್ರಯಾಣಿಕರು ಆನ್ ಲೈನ್ ನಲ್ಲಿ ಟಿಕೆಟ್ ರಿಸರ್ವ್ ಮಾಡಿದ್ದಾರೆ. ಇದರ ಜೊತೆಗೆ 30,000 ಪ್ರಯಾಣಿಕರು ಪಿಎನ್ಆರ್ ಜನರೇಟ್ ಮಾಡಿಕೊಂಡಿದ್ದಾರೆ.
ಹೌರಾ ಮತ್ತು ನವದೆಹಲಿ ನಡುವಿನ ರೈಲ್ವೆ ಬುಕ್ಕಿಂಗ್ ಸೇವೆ ಆರಂಭವಾಗಿ ಹತ್ತೇ ನಿಮಿಷದಲ್ಲಿ ಎಸಿ-1 ಹಾಗೂ ಎಸಿ-3 ಕೋಚ್ ನ ಎಲ್ಲ ಟಿಕೆಟ್ ಗಳನ್ನ್ನು ಪ್ರಯಾಣಿಕರು ರಿಸರ್ವ್ ಮಾಡಿದ್ದಾರೆ ಎಂದು ಭಾರತೀಯ ರೈಲ್ವೆ ಇಲಾಖೆಯು ತಿಳಿಸಿದೆ. ಮೇ.12ರ ಮಂಗಳವಾರದಿಂದ ನವದೆಹಲಿಯಿಂದ ದೇಶದ 15 ಪ್ರಮುಖ ನಗರಗಳಿಗೆ ಪ್ಯಾಸೆಂಜರ್ ರೈಲುಗಳ ಸಂಚಾರ ಆರಂಭವಾಗಲಿದೆ. ರಾಷ್ಟ್ರ ರಾಜಧಾನಿ ನವದೆಹಲಿ, ದಿಬ್ರುಘರ್, ಅಗರ್ತಲಾ, ಹೌರಾ, ಪಾಟ್ನಾ, ಬಿಸಲ್ ಪುರ್, ರಾಂಚಿ, ಭುವನೇಶ್ವರ್, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾವ್, ಕೇಂದ್ರ ಮುಂಬೈ, ಅಹ್ಮದಾಬಾದ್ ಹಾಗೂ ಜಮ್ಮುವಿನಲ್ಲಿ ರೈಲ್ವೆ ಸೇವೆ ಆರಂಭವಾಗಲಿದೆ.


