ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಮಂಜೇಶ್ವರ ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆ ಸಹಿತ ಜಿಲ್ಲೆಯ 5 ಶಾಲೆಗಳಿಗೆ ನೂತನ ಕಟ್ಟಡ ನಿರ್ಮಿಸಲು ಆಡಳಿತೆ ಮಂಜೂರಾತಿ ಲಭಿಸಿದೆ.
ಮಂಜೇಶ್ವರದ ಶಾಲೆಗೆ 5 ತರಗತಿ ಕೊಠಡಿಗಳ ಸಹಿತ ನೂತನಕಟ್ಟಡ ನಿರ್ಮಾಣಕ್ಕೆ 85.70 ಲಕ್ಷ ರೂ. ಮಂಜೂರು ಮಾಡಲಾಗಿದೆ. ಮಂಜೇಶ್ವರ ಗ್ರಾಮಪಂಚಾಯತ್ ತಮ್ಮ ಕಂತು ರೂಪದಲ್ಲಿ 15 ಲಕ್ಷ ರೂ., ಉಳಿದ 70.70 ಲಕ್ಷ ರೂ.ವನ್ನು ಕಾಸರಗೋಡು ಅಭಿವೃಧ್ಧಿ ಪ್ಯಾಕೇಜ್ ನಿಂದ ನೀಡಲಾಗುವುದು. ಉಳಿದಂತೆ ಕೋಡೋತ್ ಎ.ಜಿ.ಎಚ್.ಎಸ್, ತ್ರಿಕರಿಪುರ ವಿ.ಪಿ.ಪಿ.ಎಂ.ಕೆ.ಪಿ.ಎಸ್.ಜಿ.ಎಚ್.ಎಸ್., ಪಳ್ಳಿಕ್ಕರೆ ಜಿ.ಎಚ್.ಎಸ್.ಎಸ್., ತವನತ್ತ ಜಿ.ಎಲ್.ಪಿ.ಎಸ್.ಗಳಿಗೆ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ಲಭಿಸಿದೆ.

