HEALTH TIPS

ಕೇರಳದಲ್ಲಿ ಕೋವಿಡ್ ಪರೀಕ್ಷೆ ದೇಶದ ಸರಾಸರಿಗಿಂತ ಮೂರು ಪಟ್ಟು: ಪಿಣರಾಯಿ ವಿಜಯನ್

   
       ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ -19 ತಪಾಸಣೆ ತುರ್ತು ರೀತ್ಯಾ ನಡೆಯುತ್ತಿಲ್ಲ ಎಂಬ ಆಕ್ಷೇಪಕ್ಕೆ ಉತ್ತರಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಷ್ಟ್ರದ ಸರಾಸರಿಗಿಂತ ಮೂರು ಪಟ್ಟು ಹೆಚ್ಚಿನ ಮಟ್ಟದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
       ತಪಾಸಣೆ ಅಗತ್ಯವಿರುವ ಎಲ್ಲರನ್ನು ಐಸಿಎಂಆರ್ ಮಾನದಂಡಕ್ಕೆ ಅನುಗುಣವಾಗಿ ಪರಿಶೀಲಿಸಲಾಗುತ್ತದೆ ಮತ್ತು ರಾಜ್ಯ ಸರ್ಕಾರವು ತಪಾಸಣೆಗೆ ಸ್ಪಷ್ಟ ಮಾರ್ಗದರ್ಶಿ ಸೂತ್ರದೊಂದಿಗೆ ಈವರೆಗೆ ಸಾಗಿಬಂದಿದೆ  ಎಂದು ಮುಖ್ಯಮಂತ್ರಿ ಹೇಳಿದರು. ಅಲ್ಲದೆ ಕೌಇಡ್ ಬಾಧಿತರಾಗಿ ಸಾವು ಮತ್ತು ಪರಿಶೀಲನೆಯಲ್ಲಿ ಪಾಸಿಟಿವ್ ಆಗುವವರ ಅಂ<ಕಿಅಂಶಗಳೂ ದೇಶದ ಇತರೆಡೆಗಳಿಂತ ವಿಭಿನ್ನವಾಗಿ ಆಶಾದಾಯಕ ಬೆಳವಣಿಗೆಯೊಂದಿಗೆ ಮುನ್ನಡೆಯಲ್ಲಿದೆ ಎಂದರು.
       ರಾಜ್ಯದಲ್ಲಿ ನಡೆಯುವ ಪ್ರತಿ 100 ಕೋವಿಡ್ ತಪಾಸಣೆಗಳಲ್ಲಿ 1.7 ಸಕಾರಾತ್ಮಕವಾಗಿದೆ ಎಂದು ಸಿಎಂ ಹೇಳಿದರು. ರಾಜ್ಯದ ಪರೀಕ್ಷಾ ಧನಾತ್ಮಕ ದರ 1.7ಶೇ. ಮತ್ತು ದೇಶದ ಪ್ರಮಾಣ 5ಶೇ. ಎಂದು ಮುಖ್ಯಮಂತ್ರಿ ಗಮನಸೆಳೆದರು. "ದಕ್ಷಿಣ ಕೊರಿಯಾದಂತೆ ವಿಶ್ವ ರಾಷ್ಟ್ರಗಳು ಇದನ್ನು 2ಶೇ. ಕ್ಕೆ ಇಳಿಸಲು ಪ್ರಯತ್ನಿಸುತ್ತಿವೆ. ಕೇರಳವೂ ಅದೇ ರೀತಿ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ರಾಜ್ಯದಲ್ಲಿ ಸಾವಿನ ಪ್ರಮಾಣ ಕೇವಲ 0.5 ಪ್ರತಿಶತದಷ್ಟಿದೆ. ಸಮರ್ಪಕ ಚಿಕಿತ್ಸಾ ಸೌಲಭ್ಯವಿದೆ ಎಂದು ಮುಖ್ಯಮಂತ್ರಿ ಹೇಳಿದರು.
     ಸುಧಾರಿತ ಸಾರ್ವಜನಿಕ ಆರೋಗ್ಯ, ಪರಿಣಾಮಕಾರಿ ಸಂಪರ್ಕ ಪತ್ತೆ ಮತ್ತು ವೈಜ್ಞಾನಿಕ ಕ್ವಾರಂಟೈನ್ ಮೂಲಕ ರಾಜ್ಯದಲ್ಲಿ ರೋಗ ನಿಯಂತ್ರಣ ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಎಲ್ಲಾ ವಿಭಾಗಗಳಲ್ಲಿ ಈವರೆಗೆ 80901 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಸಿಎಂ ಗಮನಸೆಳೆದರು. ಕೋವಿಡ್ ಸಂಬಂಧ ರಾಜ್ಯದಲ್ಲಿ ಈ ವರೆಗೆ ಒಂದು ದಶಲಕ್ಷ ಮಂದಿಗಳಲ್ಲಿ 2335 ಜನರನ್ನು ಪರೀಕ್ಷಿಸಲಾಗಿದೆ. ರಾಜ್ಯದಲ್ಲಿ ಪರೀಕ್ಷಿಸಿದ 71 ಮಂದಿಗಳ ಶೇಕಾಡಾದಂತೆ ಕೇವಲ ಒಂದು ಮಾತ್ರ ಸಕಾರಾತ್ಮಕ ಫಲಿತಾಂಶವನ್ನು ನೀಡಿದೆ. ಆದರೆ, ದೇಶದಲ್ಲಿ 23 ತಪಾಸಣೆಗಳು ಸಕಾರಾತ್ಮಕ ಫಲಿತಾಂಶವನ್ನು ಹೊಂದಿವೆ ಎಂದು ಮುಖ್ಯಮಂತ್ರಿ ಹೇಳಿದರು. ಭಾರತ ಒಟ್ಟು ಸರಾಸರಿ ತಪಾಸಣೆಗಿಂತ ಮೂರು ಪಟ್ಟು ಕೇರಳದಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಸಿಎಂ ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries