HEALTH TIPS

ರಾಜ್ಯಸಭಾ ಸದಸ್ಯ ಎಂ.ಪಿ ವೀರೇಂದ್ರ ಕುಮಾರ್ ಅಸ್ತಂಗತ

   
      ಕೋಝಿಕ್ಕೋಡ್: ರಾಜ್ಯಸಭಾ ಸದಸ್ಯ, ಜನತಾದಳ ಮುಖಂಡ, ಮಾತೃಭೂಮಿ ಪತ್ರಿಕೆಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಪಿ ವೀರೇಂದ್ರಕುಮಾರ್(84) ಗುರುವಾರ ರಾತ್ರಿ ಕೋಯಿಕ್ಕೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹೃದಯಾಘಾತದ ಹಿನ್ನೆಲೆಯಲ್ಲಿ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
       ರಾಜಕೀಯ, ಮಾಧ್ಯಮ ರಂಗಗಳಿಗೆ ಮಹತ್ವದ ಕೊಡುಗೆ ನೀಡಿದ್ದ ಇವರು ಸಮಾಜವಾದಿ ನೇತಾರರಾಗಿ ಗುರುತಿಸಿಕೊಂಡಿದ್ದರು. ಕೇಂದ್ರ ಮತ್ತು ಕೇರಳದ ಮಾಜಿ ಸಚಿವರಾಗಿದ್ದ ಇವರು 1936 ಜುಲೈ 22ರಂದು ಸಮಾಜವಾದಿ ಮುಖಂಡ ಪದ್ಮಪ್ರಭಾ ಗೌಡರ್-ಮರುದೇವಿ ಅವ್ವ ದಂಪತಿ ಪುತ್ರನಾಗಿ ವಯನಾಡ್ ಜಿಲ್ಲೆಯ ಕಲ್ಪೆಟಟದಲ್ಲಿ ಜನಿಸಿದ್ದರು. ಮದ್ರಾಸ್‍ನ ವಿವೇಕಾನಂದ ಕಾಲೇಜಿನಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಅಮೆರಿಕಾದ ಸಿನ್‍ಸಿನಾಟಿ ವಿಶ್ವ ವಇದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದರು. 1987ರಲ್ಲಿ ಕೇರಳ ವಿಧಾನಸಭೆ ಪ್ರವೇಶಿಸಿದ್ದ ಇವರು ಅರಣ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ 48ತಾಸುಗಳಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಪರಿಸರ ಪ್ರೇಮಿಯಾಗಿದ್ದ ಇವರು ಅರಣ್ಯದಿಂದ ಮರಕಡಿಯುವುದಕ್ಕೆ ತಮ್ಮ ಪ್ರಬಲ ವಿರೋಧ ವ್ಯಕ್ತಪಡಿಸಿರುವುದು ಇವರನ್ನು ರಾಜೀನಾಮೆಯತ್ತ ಕೊಂಡೊಯ್ದಿತ್ತು. 1996, 2004ರಲ್ಲಿ ಕೋಯಿಕ್ಕೋಡ್ ಲೋಕಸಭಾ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿದ್ದ ಇವರು ಭಾರತೀಯ ನ್ಯೂಸ್‍ಪೇಪರ್ ಸಒಸೈಟಿ ಎಕ್ಸಿಕ್ಯೂಟಿವ್ ಸಮಿತಿ ಸದಸ್ಯ, ಪಿಟಿಐ ನಿರ್ದೇಶಕ, ಪ್ರೆಸ್‍ಟ್ರಸ್ಟ್ ಆಫ್ ಇಂಡಿಯದ ಟ್ರಸ್ಟಿ, ಇಂಟರ್‍ನ್ಯಾಶನಲ್ ಪ್ರೆಸ್ ಇನ್‍ಸ್ಟಿಟ್ಯೂಟ್ ಸದಸ್ಯ, ಕಾಮನವೆಲ್ತ್ ಪ್ರೆಸ್‍ಯೂನಿಯನ್ ಸದಸ್ಯ, ವಲ್ರ್ಡ್ ಅಸೋಸಿಯೇಶನ್ ಆಫ್ ನ್ಯೂಸ್ ಪೇಪರ್ಸ್ ಎಕ್ಸಿಕ್ಯೂಟಿವ್ ಸಮಿತಿ ಸದಸ್ಯರಾಗಿ ಸಏವೆ ಸಲ್ಲಿಸಿದ್ದರು.2016ರಿಂದ ನಿರಂತರವಾಗಿ ರಾಜ್ಯಸಭಾ ಸದಸ್ಯರಾಗಿದ್ದರು. ಖ್ಯಾತ ಬರಹಗಾರರೂ ಆಗಿರುವ ಇವರು  ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಪ್ರತಿಷ್ಠಿತ ಸಿ.ಅಚ್ಯುತ ಮೆನನ್ ಸಾಹಿತ್ಯ ಪುರಸ್ಕಾರ, ಸ್ವದೇಶಾಭಿಮಾನಿ, ಮೂರ್ತಿದೇವಿ ಪ್ರಶಸ್ತಿ ಸಹಿತ ನೂರಾರು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.  ಅವರು ಪತ್ನಿ, ಉಷಾ, ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಶುಕ್ರವಾರ ಸಂಜೆ ವಯನಾಡ್‍ನ ಕಲ್ಪೆಟ್ಟದಲ್ಲಿ ಸರ್ಕಾರಿ ಗೌರವಾದರಗಳೊಂದಿಗೆಜೈನ ಸಂಸ್ಕøತಿಯಂತೆ ನಡೆಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries