HEALTH TIPS

ಲಾಕ್ ಡೌನ್ ಹಿನ್ನೆಲೆ-ಜೂನ್ 1ರಂದು ಶಾಲೆ ಪುನಾರಂಭವಿಲ್ಲ


          ಕಾಸರಗೋಡು: ವಾಡಿಕೆಯಂತೆ ಜೂನ್ 1ರಂದು ಕೇರಳದಲ್ಲಿ ಶಾಲೆಗಳು ಪುನಾರಂಭಗೊಳ್ಳಬೇಕಾಗಿದ್ದರೂ, ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ಬಾರಿ ನಿಗದಿತ ದಿನಾಂಕದಂದು ಶಿಕ್ಷಣ ಸಂಸ್ಥೆಗಳು ತೆರೆದು ಕಾರ್ಯಾಚರಿಸುವುದಿಲ್ಲ. ಕೇಂದ್ರದ ಆದೇಶ ಬಂದ ಬಳಿಕ ಶಾಲಾರಂಭ ನಡೆಸಲಾಗುವುದೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿರುವರು.
         ಆದರೆ ಈ ಹಿಂದೆ ತೀರ್ಮಾನಿಸಿದಂತೆ ಆನ್ ಲೈನ್ ತರಗತಿಗಳು ಪೂರ್ವನಿಗದಿಯಂತೆ ಜೂನ್ 1ರಂದೇ ಆರಂಭಗೊಳ್ಳಲಿದೆ. ಶಿಕ್ಷಕರು ಶಾಲಾರಂಭದ ವರೆಗೆ ಶಾಲೆಗೆ ಬರಬೇಕಿಲ್ಲ. ವಿದ್ಯಾರ್ಥಿಗಳು ಶಾಲೆಗಳಿಗೆ ಹಾಜರಾಗದೆ ಆನ್ ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.  ಇಂಟರ್ ನೆಟ್, ಟಿ,ವಿ ವ್ಯವಸ್ಥೆಯಿಲ್ಲದೆ ಆನ್ ಲೈನ್ ತರಗತಿಯಲ್ಲಿ ಭಾಗವಹಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಸನಿಹದ ಗ್ರಂಥಾಲಯ, ಕುಟುಂಬಶ್ರೀ ಮೂಲಕ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ. ತರಗತಿ ಯಾವ ರೀತಿಯಿಲಿದೆ ಎಂಬ ಬಗ್ಗೆ ಶೀಘ್ರ ಪ್ರಕಟಣೆ ಹೊರಬೀಳಲಿರುವುದಾಗಿ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries