HEALTH TIPS

ಹೊಸ ಅನುಭವ ನೀಡಿದ ವಿಕ್ಟರ್ಸ್ ತರಗತಿ- ಹೋಮ್ ಸ್ಕೂಲ್-ಆನ್‍ಲೈನ್ ತರಗತಿ ಆರಂಭ

     
           ಕಾಸರಗೋಡು: ಕೋವಿಡ್ ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹೊಸ ಅಧ್ಯಯನ ವರ್ಷದ ಮೊದಲ ದಿನವಾದ ಸೋಮವಾರ(ಜೂನ್ 1) ವಿದ್ಯಾರ್ಥಿಗಳು ಶಾಲೆಗೆ ತೆರಳದೆ ಮನೆಯಿಂದಲೇ ಕಲಿಕೆಗೆ ಪೂರಕ ತರಗತಿಗಳಿಗೆ ಸೋಮವಾರ ರಾಜ್ಯ ಸರ್ಕಾರದ ವಿದ್ಯಾಭ್ಯಾಸ ಇಲಾಖೆಯ ಕೈಟ್ ವಿಕ್ಟರ್ಸ್ ಚಾನೆಲ್ ಮೂಲಕ ಆರಂಭಗೊಂಡಿತು.
         ನೂತನ ತಂತ್ರಜ್ಞಾನದೊಂದಿಗೆ ಸಿದ್ದಪಡಿಸಲಾದ ಆನ್‍ಲೈನ್ ತರಗತಿ ವ್ಯವಸ್ಥೆಗೆ ಸೋಮವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದಿಕ್ಸೂಚಿ ಭಾಷಣ ಮಾಡುವ ಮೂಲಕ ಚಾಲನೆ ನೀಡಿದರು. ಹೈಯರ್ ಸೆಕೆಂಡರಿ ತರಗತಿಯ ಇತಿಹಾಸ ಪಠ್ಯವನ್ನು ಬೋಧಿಸುವ ಮೂಲಕ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಉದ್ಘಾಟಿಸಿದರು.
        ಓನ್ ಲೈನ್ ತರಗತಿಗಳ ಮಾರ್ಗದರ್ಶನಗಳನ್ನು ನೀಡಲು, ವಿದ್ಯಾರ್ಥಿಗಳ ಸಂಶಯಗಳನ್ನು ಬಗೆಹರಿಸಲು ಶಿಕ್ಷಕರು ನೆರವಾಗುವರು. ಈ ನಿಟ್ಟಿನಲ್ಲಿ ಮಕ್ಕಳ ಹೆತ್ತವರು ಗಮನಿಸಬೇಕು ಎಂದು ದಿಕ್ಸೂಚಿ ಭಾಷಣಗೈದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದರು. ಇಂದಿನ ಕೋವಿಡ್ ತುರ್ತು ಸಂದರ್ಭದಲ್ಲಿ ಶಾಲಾರಂಭಗೊಳಿಸುವ ಸಾಧ್ಯತೆ ಕಡಿಮೆ ಇದೆ. ಒಂದು ವೇಳೆ ಶಾಲಾರಂಭಗೊಳಿಸಿದರೆ ವ್ಯಾಪಕ ಕೋವಿಡ್ ಸೋಂಕು ದಿಕ್ಕೆಡಿಸುವುದು ಎಂದು ಅವರು ತಿಳಿಸಿದರು.
        ಬೆಳಿಗ್ಗೆ 8.30 ರಿಂದ ಆರಂಭಗೊಂಡ ಆನ್ ಲೈನ್ ತರಗತಿಯಲ್ಲಿ ಮೊದಲು ಪ್ಲಸ್ ಟು ವಿದ್ಯಾರ್ಥಿಗಳ ತರಗತಿ ನಡೆಯಿತು. ಪ್ರತಿಯೊಂದು ತರಗತಿಗೂ ಅರ್ಧ ಗಂಟೆಗಳ ಆನ್ ಲೈನ್ ಕ್ಲಾಸ್ ಗಳು ನಡೆಸುವ ನಿಟ್ಟಿನಲ್ಲಿ ಯೋಜನೆ ಸಿದ್ದಪಡಿಸಲಾಗಿದೆ. ಜೂ.6ರ ವರೆಗೆ ಟ್ರಯಲ್ ತರಗತಿಗಳು ಮಾತ್ರ ನಡೆಯಲಿದೆ. ಸೋಮವಾರದಿಂದ ಆರಂಭಗೊಂಡು ಶನಿವಾರದ ವರೆಗೆ ನಡೆದ ಆನ್ ಲೈನ್ ತರಗತಿಗಳ ಮಾದರಿಯನ್ನೇ ಜೂ.8 ರಿಂದ ಮರು ಪ್ರಸಾರ ಮಾಡಲಾಗುತ್ತದೆ. ಟಿ.ವಿ. ಸ್ಮಾರ್ಟ್ ಪೋನ್ ಅಥವಾ ಇಂಟರ್ನೆಟ್ ಸೌಕರ್ಯಗಳಿಲ್ಲದ ವಿದ್ಯಾರ್ಥಿಗಳನ್ನು ಗುರುತಿಸಿ ಶಾಲಾ ಮುಖ್ಯೋಪಾಧ್ಯಾಯರು, ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು, ಕುಟುಂಬಶ್ರೀ ಘಟಕಗಳು, ಶಾಲಾ ರಕ್ಷಕ ಶಿಕ್ಷಕ ಸಂಘಗಳ ಮೂಲಕ ವ್ಯವಸ್ಥೆಗಳನ್ನು ಏರ್ಪಡಿಸಬೇಕೆಂದು ಸರ್ಕಾರ ನಿರ್ದೇಶನ ನೀಡಿದೆ. ಕಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ನಡೆಯುವ ಹೊತ್ತು ಹೆತ್ತವರೂ ಜೊತೆಯಲ್ಲಿರಬೇಕೆಂದು ಸೂಚಿಸಲಾಗಿದೆ.
          ಕನ್ನಡ ವಿದ್ಯಾರ್ಥಿಗಳಿಗೆ ತೊಡಕು!:
   ಗಡಿನಾಡು ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ತರಗತಿ ಆರಂಭಿಸದಿರುವುದರಿಂದ ತೊಡಕಾಯಿತು. ಆದರೆ ಹತ್ತನೇ ತರಗತಿ ಜೀವಶಾಸ್ತ್ರ ಮತ್ತು ಒಂಭತ್ತನೇ ತರಗತಿಯ ಗಣಿತ ಪಠ್ಯಗಳ ಪರೀಕ್ಷಣಾರ್ಥ ತರಗತಿ ಸಂಜೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಒಂದರಿಂದ ಪ್ಲಸ್ ಟು ತರಗತಿ ವರೆಗಿನ ಕನ್ನಡ ಮಾಧ್ಯಮ ಆನ್ ಲೈನ್ ತರಗತಿಗಳು ಆರಂಭಗೊಳ್ಳಲಿದೆ ಎಂದು ಅಧಿಕೃತರು ತಿಳಿಸಿರುವರು.
    ಜಿಲ್ಲೆಯ 188 ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿ ವರೆಗೆ 40 ಸಾವಿರ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆನ್ ಲೈನ್ ತರಗತಿಗಳು ಕನ್ನಡ ಮಾಧ್ಯಮದಲ್ಲಿ ಪ್ರಸಾರಗೊಂಡರಷ್ಟೇ ಕಾಸರಗೋಡಿನ ವಿದ್ಯಾರ್ಥಿಗಳಿಗೆ ಪ್ರಯೋಜನವಾದೀತು. ಇತರ ಹಕ್ಕುಚ್ಯುತಿಗಳಂತೆ ಆನ್ ಲೈನ್ ತರಗತಿಯೂ ನಿರ್ಲಕ್ಷ್ಯಕ್ಕೊಳಗಾದರೆ ಮತ್ತೊಂದು ಹೋರಾಟಕ್ಕೆ ಸರ್ಕಾರ ಎದುರಿಸಬೇಕಾಗುವುದೆಂಬ ಮಾತುಗಳು ಕೇಳಿಬಂದಿದೆ.
          ಆಂಗ್ಲ ಮಾಧ್ಯಮವೂ ಇಲ್ಲ:
   ರಾಜ್ಯದ ಪ್ರತಿಶತಃ 50 ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ಕಲಿಕೆ ನಡೆಸುತ್ತಿರುವುದರಿಂದ ಆಂಗ್ಲ ಮಾಧ್ಯಮದಲ್ಲೂ ಆನ್ ಲೈನ್ ತರಗತಿ ಆರಂಭಿಸಬೇಕೆಂಬ ಮಾತುಗಳೂ ಕೇಳಿಬಂದಿದೆ. ಆದರೆ ಸರ್ಕಾರ ಈವರೆಗೆ ಏನನ್ನೂ ತಿಳಿಸಿಲ್ಲ.
           ಮಾಜಿ ಮುಖ್ಯಮಂತ್ರಿ ಚಾಂಡಿಯಿಂದ ಲೇವಡಿ!
    ಕೇರಳ ಇನ್ಪ್ರಾಸ್ಟ್ರಕ್ಷರ್ ಆಂಡ್ ಟೆಕ್ನೋಲಜಿ ಪೋರ್ ಎಜ್ಯುಕೇಶನ್(ಕೈಟ್) ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನದ ಭಾಗವಾಗಿ 2001-02ರಲ್ಲಿ ಆರಂಭಗೊಂಡಿತ್ತು. 2017ರಲ್ಲಿ ಈ ಯೋಜನೆಯನ್ನು ಅಂದಿನ ಯುಡಿಎಫ್ ಸರ್ಕಾರ ವಿಸ್ಕøತವಾಗಿ ಬೆಳೆಸಿ ಒಂದು ಟಿವಿ ಚಾನೆಲ್ ಆರಂಭಿಸಿತು. ಅದಕ್ಕೆ ಕೈಟ್ ವಿಕ್ಟರ್ ಚಾನೆಲ್ ಎಂದು ಹೆಸರಿಡಲಾಯಿತು. ಅಂದು ಮುಖ್ಯಮಂತ್ರಿಗಳಾಗಿದ್ದ ಉಮ್ಮನ್ ಚಾಂಡಿಯವರ ಸ್ವ ಆಸಕ್ತಿಯಿಂದ ಆರಂಭಗೊಂಡ ವಿದ್ಯಾಭ್ಯಾಸ ಕ್ಷೇತ್ರದ ಟಿವಿ ಚಾನೆಲ್ ಆರಂಭದ ಬಗ್ಗೆ ಇಂದು ಆಡಳಿತರೂಢವಾಗಿರುವ ಎಲ್‍ಡಿಎಫ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಬೃಹತ್ ಪ್ರತಿಭಟನೆಯನ್ನು ನಡೆಸಿ ಗೊಂದಲ ಸೃಷ್ಟಿಸಿತ್ತು.
    ಪ್ರಸ್ತುತ ಅಂದು ಪ್ರತಿಭಟನೆಗೈದ ಎಲ್‍ಡಿಎಫ್ ಪಕ್ಷ ಇಂದು ಆಡಳಿತದಲ್ಲಿದ್ದು ಕೋವಿಡ್ ಹಿನ್ನೆಲೆಯಲ್ಲಿ ತಾವೇ ಪ್ರತಿಭಟಿಸಿ ದಾಂಧಲೆ ಎಬ್ಬಿಸಿದ ವಿಕ್ಟರ್ ಚಾನೆಲ್ ನ್ನು ಭಾರೀ ಪ್ರಚಾರದೊಂದಿಗೆ ಬಳಸಬೇಕಾಗಿ ಬಂದಿರುವುದು ದುರ್ದೈವ ಎಂದು ಫೇಸ್‍ಬುಕ್ ಪೆÇೀಸ್ಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ತಂತ್ರಜ್ಞಾನದ ಮಹತ್ವವನ್ನು ಅರಿತುಕೊಳ್ಳಲು ಎಲ್‍ಡಿಎಫ್‍ಗೆ ಹದಿನಾಲ್ಕು ವರ್ಷಗಳು ಮತ್ತು ಕರೋನಾ ಮಹಾಮಾರಿಯ ಕಾರಣ ಆಗಿರುವುದು ವಿಶೇಷ ಘಟನೆಯಾಗಿದೆ ಎಂದು ಉಮ್ಮನ್ ಚಾಂಡಿ ತಮ್ಮ ಪೇಸ್‍ಬುಕ್ ಪೋಸ್ಟ್ ನಲ್ಲಿ  ತಿಳಿಸಿರುವರು.
      1 ರಿಂದ 12 ರವರೆಗೆ ರಾಜ್ಯದ ಸುಮಾರು 40 ಲಕ್ಷ ವಿದ್ಯಾರ್ಥಿಗಳು ವಿಕ್ಟರ್ಸ್ ಚಾನೆಲ್ ಮೂಲಕ  ಆನ್‍ಲೈನ್‍ನಲ್ಲಿ ತರಗತಿಗಳನ್ನು ಪ್ರಾರಂಭಿಸಿರುವುದು ಅಭಿನಂದನಾರ್ಹ.  ಚಾನಲ್‍ನ ಮಹತ್ವವನ್ನು ಗುರುತಿಸುವ ಮತ್ತು ಅದನ್ನು ವ್ಯಾಪಕವಾಗಿ ಬಳಸಲು ನಿರ್ಧರಿಸಿರುವ ಸರ್ಕಾರದ ನಿರ್ಧಾರ ಸ್ವಾಗತಕರ. ಅಲ್ಲದೆ, ಆನ್‍ಲೈನ್ ತರಗತಿಗಳನ್ನು ಪ್ರಾರಂಭಿಸುವಾಗ, ಇಂಟರ್ನೆಟ್ ಅಥವಾ ಟಿವಿ ಇಲ್ಲದ ವಿದ್ಯಾರ್ಥಿಗಳನ್ನೂ ಗಮನದಲ್ಲಿರಿಸಿ ವಿಸ್ಕøತ ಕಾರ್ಯಯೋಜನೆ ಸರ್ಕಾರ ತುರ್ತು ಕೈಗೊಳ್ಳಬೇಕು. ಅಂತಹ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೂ ಇಂತಹ ಸೌಲಭ್ಯ ತಲಪಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಚಾಂಡಿ ಫೇಸ್‍ಬುಕ್‍ನಲ್ಲಿ ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries