ಕಾಸರಗೋಡು: ಆಲ್ ಕೇರಳ ಫೆÇಟೋಗ್ರಾಫರ್ಸ್ ಅಸೋಸಿಯೇಶನ್ ವೆಸ್ಟ್ (ಎಕೆಪಿಎ)ಘಟಕದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯಂಗವಾಗಿ ನಗರದ ಸರ್ಕಾರಿ ಹೈಸ್ಕೂಲ್‍ನಲ್ಲಿ ಗಿಡಗಳನ್ನು ನೆಡಲಾಯಿತು.
ಕಾಸರಗೋಡು ನಗರಸಭಾ ಮಾಜಿ ಅಧ್ಯಕ್ಷ ಟಿ.ಇ.ಅಬ್ದುಲ್ಲ ಅವರು ಗಿಡ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯ ಮೈಂದಪ್ಪ, ಎಕೆಪಿಎ ವೆಸ್ಟ್ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಉಪಾಧ್ಯಕ್ಷ ಶ್ರೀಕಾಂತ್ ಕಾಸರಗೋಡು, ವಸಂತ ಕೆರೆಮನೆ, ರತೀಶ್, ಅಬ್ಬಾಸ್ ಬೇಗಂ, ಶಾಲಾ ಅಧ್ಯಾಪಕರು, ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.





