HEALTH TIPS

ಸಮರಸ ಆರೋಗ್ಯ ಸಮೃದ್ದಿ: ಜೀವ-ಜೀವನ ದರ್ಶನ-ಭಾಗ:11-ಬರಹ:ಡಾ.ಪ್ರಸನ್ನ ನರಹರಿ

     
                       ಮುಂದುವರಿದ ಭಾಗ-11
            ಇನ್ನು ಕೆಲವರಿಗೆ ಹೊಟ್ಟೆ ಉರಿ, ತಲೆನೋವು, ನಿದ್ದೆ ಬಂದಂತೆ ಆಗಬಹುದು. ಈ ಔಷಧಿಯನ್ನು ರೋಗದ ಚಿಹ್ನೆ ದೇಹದಿಂದ ಹೋಗುವ ವರೆಗೆ ಸೇವಿಸುವುದು ಉತ್ತಮ. ಅಂದರೆ ಕೇವಲ 30 ದಿನಗಳಲ್ಲೇ ಎಲ್ಲರಿಗೂ ಔಷಧಿ ಸೇವನೆ ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ರೋಗಿಯು 30 ದಿನಗಳ ಕೋರ್ಸ್ ಮುಗಿಯುವ ಮೊದಲು ವೈದ್ಯರನ್ನು ಕಾಣಬೇಕು. ವೈದ್ಯರು ರೋಗದ ಕುರುಹು ನೋಡಿ ಔಷಧಿಯನ್ನು ನಿಲ್ಲಿಸಬಹುದು ಎಂದು ಹೇಳಿದ ಮೇಲೆ ಮಾತ್ರ ಸೇವನೆ ನಿಲ್ಲಿಸಿದರೆ ಸಾಕು. ಇಲ್ಲವಾದಲ್ಲಿ ರೋಗ ಪುನಃ ಮರುಕಳಿಸಬಹುದು.
   ಗಜಕರ್ಣ ರೋಗ ಒಂದು ಫಂಗಸ್ ನಿಂದ ಉಂಟಾಗುವ ಖಾಯಿಲೆಯೇ ಹೊರತು ಚರ್ಮದ ಅಲರ್ಜಿ ಅಲ್ಲ. ಹಾಗಾಗಿ ಯಾವುದೇ ಪಥ್ಯಗಳನ್ನೂ ಮಾಡುವ ಅಗತ್ಯವಿಲ್ಲ. ಆದರೆ ಮುಂಜಾಗರೂಕತೆ ಅಗತ್ಯ
   ಅವು ಯಾವುವೆಂದರೆ:
   1)ಹೊಸತಾಗಿ ಕೊಂಡುಕೊಂಡ ಅಥವಾ ಹೊಲಿಸಿದ ಒಳ ಉಡುಪುಗಳನ್ನು ತೊಳೆಯದೆ ಬಳಸಬೇಡಿ
   2)ಒದ್ದೆ ಒಳ ಉಡುಪುಗಳನ್ನು ಧರಿಸಲೇ ಬೇಡಿ.
   3) ಜನನೇಂದ್ರಿಯವನ್ನು ತೊಳೆದು ನೀರಿನ ತೇವವನ್ನು ಚೆನ್ನಾಗಿ ಒರೆಸಿ ತೆಗೆಯಬೇಕು
   4)ಬೇರೆಯವರ ಒಳ ಉಡುಪುಗಳನ್ನು, ಟೀ ಶರ್ಟ್ ಗಳನ್ನು ಬಳಸಲೇ ಬೇಡಿ.
    5)ಸೊಂಟದ ನೂಲನ್ನು ಹಾಕದಿರುವುದು ಉತ್ತಮ. ಯಾಕೆಂದರೆ ಇದರಲ್ಲಿ ನೀರಿನ ತೇವ ಉಳಿಕೆಯಾಗುವುದರಿಂದ ಫಂಗಸ್ ಕ್ರಿಗಳು ಸದಾ ಬೆಳೆಯಲು ಕಾರಣವಾಗುತ್ತದೆ.
    6)ಸ್ವ ಚಿಕಿತ್ಸೆ ಮಾಡದೆ ವೈದ್ಯರ ಸಲಹೆಯಂತೆ ಕ್ರೀಮುಗಳನ್ನು ಹಚ್ಚಬೇಕು. ಚಿಕಿತ್ಸೆಯ ಸಂಪೂರ್ಣ ಅವಧಿಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ತುಂಬಾ ಪ್ರಯೋಜನಕಾರಿ.
    7)ಮನೆಯಲ್ಲಿ ಈ ರೋಗ ಬಾಧಿತರೆಲ್ಲರೂ ಒಂದೇ ಬಾರಿಗೆ ಚಿಕಿತ್ಸೆಯನ್ನು ವೈದ್ಯರ ಸಲಹೆಯಂತೆ ಪಡೆದುಕೊಳ್ಳುವುದು ಉತ್ತಮ.
                           
                                            ಬರಹ: ಡಾ.ಪ್ರಸನ್ನಾ ನರಹರಿ.ಕಾಸರಗೋಡು. ಖ್ಯಾತ ಚರ್ಮ-ಲೈಂಗಿಕ ರೋಗ ತಜ್ಞರು.
                                            ನಿರ್ದೇಶಕಿ ಐಎಡಿ ಕಾಸರಗೋಡು.
                                                                                  Phone : 04994-240862, 240863 08590125313                                                                         Clinic : 04994-223687, 230116 Web : www.iad.org.in
                                ಈ ಕಂತು ಮುಗಿಯಿತು.     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries