ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಒಂದೇ ದಿನ ಸಂಪರ್ಕ ಮೂಲಕದ 11 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗರೂಕತೆ ಪಾಲಿಸುಂತೆ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು.
ಕಾಸರಗೋಡು ನಗರದ ತರಕಾರಿ ಅಂಗಡಿಯಲ್ಲಿ ನೌಕರಿ ನಡೆಸುತ್ತಿರುವ 4 ಮಂದಿಗೆ, ಸಮೀಪದ ಹಣ್ಣಿನ ಅಂಗಡಿಯ ಮಾಲೀಕ ಶುಕ್ರವಾರ ಸೋಂಕು ತಗುಲಿರುವುದು ಖಚಿತಗೊಂಡವರು. ತರಕಾರಿ ಅಂಗಡಿಯ ಮಾಲೀಕ ವಾಹನ ಮೂಲಕ ಮಂಗಳೂರಿಗೆ ತರಕಾರಿ ಖರೀದಿಗಾಗಿ ಹೋಗಿಬರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಬರುವವಾಹನಗಳ ಸೂಕ್ಷ್ಮ ತಪಾಸಣೆ ಚುರುಕುಗೊಳಿಸಲಾಗುವುದು. ಕರ್ನಾಟಕದಿಂದ ಅಡ್ಡದಾರಿಗಳ ಮೂಲಕ ಕೆಲವರು ಜಿಲ್ಲೆಗೆ ಆಗಮಿಸುತ್ತಿರುವುದು ಗಂಭೀರ ಸಮಸ್ಯೆಗೆ ಕಾರಣವಾಗಲಿದೆ. ಈ ಕ್ರಮವನ್ನು ತಡೆಯುವಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಅವರು ವಿನಂತಿಸಿದರು. ಇತರ ರಾಜ್ಯಗಳಿಂದ ಊರಿಗೆ ಮರಳುವ ಮಂದಿ ನಿಖರ ಮಾಹಿತಿಗಳನ್ನು ನೀಡುವಂತೆ, ಯಾತ್ರಾ ಮಾಹಿತಿಗಳನ್ನು ಮುಚ್ಚಿಡಕೂಡದು ಎಂದು ಅವರು ಬಿನ್ನವಿಸಿದರು. ಜಿಲ್ಲಾಡಳಿತೆ ಮತ್ತು ಆರೋಗ್ಯ ಇಲಾಖೆ ತಿಳಿಸಿರುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಂಥಾ ಆದೇಶ ಉಲ್ಲಂಘನೆ ನಡೆಸಿದವರ ವಿರುದ್ಧ ಎಪಿಡೆಮಿಕ್ ಡಿಸೀಸ್ ಆರ್ಡಿನೆನ್ಸ್ 2020 ಪ್ರಕಾರ ಶಿಕ್ಷೆ ವಿಧಿಸಬಹುದಾಗಿದೆ ಎಂದವರು ಮುನ್ನೆಚ್ಚರಿಕೆ ನೀಡಿರುವರು.


