HEALTH TIPS

ಕಣ್ಣೂರು ವಿಶ್ವವಿದ್ಯಾನಿಲಯ ಎಂ.ಎ ಕನ್ನಡ ಫಲಿತಾಂಶ ಪ್ರಕಟ-ಕಾಸರಗೋಡು ಕಾಲೇಜಿಗೆ ಮೂರು ರ್ಯಾಂಕ್

 
        ಕಾಸರಗೋಡು : ಕಣ್ಣೂರು ವಿಶ್ವವಿದ್ಯಾನಿಲಯದ ಕನ್ನಡ ಸ್ನಾತಕೋತ್ತರ ಪದವಿಯ ಫಲಿತಾಂಶ ಪ್ರಕಟವಾಗಿದ್ದು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಅನುಕ್ರಮವಾಗಿ ಚೈತ್ರಾ ಎ (80.4%), ಸುನೀತಾ ಮಯ್ಯ ಬಿ (78.9%) ಹಾಗೂ ತೃತೀಯ ಸ್ಥಾನವನ್ನು ವಿದ್ಯಾಶ್ರೀ ಎಸ್ (78%) ಪಡೆದುಕೊಂಡಿದ್ದಾರೆ. ಇವರು ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು.
           ಪ್ರಥಮ ಸ್ಥಾನವನ್ನು ಪಡೆದ ಚೈತ್ರ ಎ ಅವರು ಮಣಿಯಂಪಾರೆ ಸಮೀಪದ ನೀಲಪ್ಪ ಹಾಗೂ ಜ್ಯೋತಿ ದಂಪತಿಯರ ಪುತ್ರಿ. ಪ್ರಬಂಧ ರಚನೆ, ಕವನ ರಚನೆಯಲ್ಲಿ ಆಸಕ್ತರಾಗಿದ್ದು, ಬಹುಮಾನವನ್ನು ಪಡೆದುಕೊಂಡಿದ್ದಾರೆ. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಾಹಿತ್ಯಕ ಸಾಂಸ್ಕøತಿಕ ವೇದಿಕೆ ಸ್ನೇಹರಂಗದ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸರಕಾರಿ ಕಾಲೇಜು ಕಾಸರಗೋಡು ಇಲ್ಲಿ ಬಿ.ಎ ಪದವಿಯನ್ನು ಪೂರೈಸಿ, ಕಣ್ಣೂರು ವಿವಿಯ ಚಾಲಾ ಕೇಂದ್ರದಿಂದ ಬಿಎಡ್ ಪದವಿಯನ್ನು  ಪಡೆದಿದ್ದಾರೆ. ಇವರು ಶೇಣಿ ಶ್ರೀ ಶಾರದಾಂಬ ಪ್ರೌಢಶಾಲೆ, ಶ್ರೀ ಸುಬ್ರಹ್ಮಣ್ಯೇಶ್ವರ ಹಿರಿಯ ಪ್ರೌಢ ಶಾಲೆ ಕಾಟುಕುಕ್ಕೆ ಇಲ್ಲಿನ ಹಳೆವಿದ್ಯಾರ್ಥಿನಿ.
           ದ್ವಿತೀಯ ಸ್ಥಾನವನ್ನು ಪಡೆದ ಸುನೀತಾ ಮಯ್ಯ ಬಿ ಅವರು ಮಧೂರು ಸಮೀಪದ ಬನ್ನೂರಿನ ವೆಂಕಟ್ರಮಣ ಮಯ್ಯ ಹಾಗೂ ಲಲಿತಾ ಮಯ್ಯ ಅವರ ಪುತ್ರಿ. ಕವನ ರಚನೆ, ಯಕ್ಷಗಾನ, ತಾಳಮದ್ದಳೆ, ಗೊಂಬೆಯಾಟಗಳಲ್ಲಿ ತೊಡಗಿಸಿಕೊಂಡವರಾಗಿದ್ದು, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ಸಂಘ ಇದರ ನಿರ್ದೇಶಕರಾದ ರಮೇಶ್ ಕೆ, ವಿ ಅವರಿಂದ ಕಳೆದೆರಡು ವರ್ಷಗಳಿಂದ ಬೊಂಬೆಯಾಟವನ್ನು ಅಭ್ಯಾಸ ಮಾಡುತ್ತಿದ್ದಾರೆ. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ಸಂಘ ಹಾಗೂ ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಸಹಕಾರದೊಂದಿಗೆ ಮೂರು ಭಾಷೆಗಳಲ್ಲಿ ಆಯೋಜಿಸಿದ ಕೊರೊನಾ ಯಕ್ಷ ಜಾಗೃತಿ ವಿಶೇಷ ಯೋಜನೆಯಲ್ಲಿ ಇವರು ಗೊಂಬೆಗಳ ಸೂತ್ರಧಾರಿಯಾಗಿ ಭಾಗವಹಿಸಿದ್ದಾರೆ.  ಕಣ್ಣೂರು ವಿವಿ ಕಲೋತ್ಸವ ಯಕ್ಷಗಾನ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿದ್ದಾರೆ.  2017 ರಲ್ಲಿ ಕಾಸರಗೋಡು ಯಕ್ಷಗಾನ ಸಂಶೋಧನ ಕೇಂದ್ರದಿಂದ ಒಂದು ತಿಂಗಳ ಕಾಲ ಎಡನೀರಿನಲ್ಲಿ ನಡೆದ ಯಕ್ಷಗಾನ ಶಿಬಿರದಲ್ಲಿ ಇವರು ಶಿಬಿರಾರ್ಥಿಯಾಗಿದ್ದರು. ಸ್ನೇಹರಂಗದ ಉಪಸಂಪಾದಕಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪ್ರಥಮ ಸ್ಥಾನದೊಂದಿಗೆ ಬಿ.ಎ ಪದವಿಯನ್ನು ಪೂರೈಸಿದ್ದರು. ಕಲ್ಲಕಟ್ಟ ಎಂ.ಎ ಯು.ಪಿ ಶಾಲೆ,  ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಕೂಡ್ಲು, ಸರಕಾರಿ ಹಿರಿಯ ಪ್ರೌಢಶಾಲೆ ನೆಲ್ಲಿಕುಂಜೆ ಈ ಸಂಸ್ಥೆಗಳ ಹಳೆ ವಿದ್ಯಾರ್ಥಿನಿಯಾಗಿದ್ದಾರೆ.
        ತೃತೀಯ ಸ್ಥಾನವನ್ನು ಪಡೆದ ವಿದ್ಯಾಶ್ರೀ ಎಸ್ ಇವರು ಸಿರಿಬಾಗಿಲು ಬಳಿಯ ನೀರಾಳದ ಅಮ್ಮು ಪೂಜಾರಿ ಹಾಗೂ ಭವಾನಿ ದಂಪತಿಯರ ಪುತ್ರಿ. ಸ್ನೇಹರಂಹದ ಸದಸ್ಯೆಯಾಗಿದು, ಕಥಾರಚನೆ ಸ್ಪರ್ಧೆಗಳಲ್ಲಿ ಬಹುಮಾನವನ್ನು ಪೆದಿದ್ದಾರೆ. ಸರಕಾರಿ ಕಾಲೇಜು ಕಾಸರಗೋಡು ಇಲ್ಲಿ ಬಿ.ಎ ಪದವಿಯನ್ನು ಪೂರೈಸಿ, ಕಣ್ಣೂರು ವಿವಿಯ ಚಾಲಾ ಕೇಂದ್ರದಿಂದ ಬಿಎಡ್ ಪದವಿಯನ್ನು  ಪಡೆದಿದ್ದಾರೆ. ಇವರು ಜಿ.ಯು.ಪಿ. ಎಸ್ ಮೋಗ್ರಾಲ್ ಪುತ್ತೂರು ಹಾಗೂ ಬಿ.ಇ.ಯಂ ಹಿರಿಯ ಪ್ರೌಢಶಾಲೆಯ ಹಳೆ ವಿದ್ಯಾರ್ಥಿನಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries