HEALTH TIPS

ಜುಲೈ ತಿಂಗಳನ್ನು ರಾಷ್ಟ್ರೀಯ ಡೆಂಗೆ ಜ್ವರ ವಿರುದ್ಧ ಮಾಸಾಚರಣೆಯಾಗಿಸುವ ಚಟುವಟಿಕೆಗಳಿಗೆ ಸಿದ್ಧತೆ


            ಕಾಸರಗೋಡು: ಜುಲೈ ತಿಂಗಳನ್ನು ರಾಷ್ಟ್ರೀಯ ಡೆಂಗೆ ಜ್ವರ ವಿರುದ್ಧ ಮಾಸಾಚರಣೆಯಾಗಿ ಆಚರಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಚಟುವಟಿಕೆಗಳಿಗೆ ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.
         ಕಾರ್ಯಕ್ರಮಗಳ ಅಂಗವಾಗಿ ಡೆಂಗೆ ನಿಗಾ, ಈಡಿಸ್ ಸೊಳ್ಳೆಗಳ ನಿಗಾ, ಸಂಯೋಜಿತ ಸೊಳ್ಳೆ ನಶೀಕರಣ, ಜನಜಾಗೃತಿ ಸಹಿತ ಚಟುವಟಿಕೆಗಳನ್ನು ಚುರುಕುಗೊಳಿಸಲಾಗುವುದು. ಡೆಂಗೆ ಜ್ವರ ಅಧಿಕ ಪ್ರಮಾಣದಲ್ಲಿ ವರದಿಯಾದ, ನಿಗಾದಲ್ಲಿ ಹೈರಿಸ್ಕ್ ಆಗಿ ಪತ್ತೆಯಾದ ಪ್ರದೇಶಗಳಲ್ಲಿ ಪ್ರತಿರೋಧ ಚಟುವಟಿಕೆ, ಸೊಳ್ಳೆ ನಿಯಂತ್ರಣ ದಕ್ಷಗೊಳಿಸಲಾಗುವುದು. ಮನೆಗಳಲ್ಲಿ ಮತ್ತು ಆಸುಪಾಸು ಸೊಳ್ಳೆ ಸಂತಾನೋತ್ಪತ್ತಿ ಕೇಂದ್ರಗಳ ನಾಶ, ಆರೋಗ್ಯ-ಶುಚಿತ್ವ ವಾರ್ಡ್ ಮಟ್ಟದ ಸಮಿತಿಗಳ ಪ್ರತ್ಯೇಕ ಸಭೆಗಳನ್ನು ನಡೆಸುವುದು ಜರುಗಲಿದೆ. ಸ್ಥಳೀಯಾಡಳಿತ ಸಂಸ್ಥೇಗಳ ಸಹಕಾರದಿಂದ ಈ ಚಟುವಟಿಕೆಗಳು ನಡೆಯಲಿವೆ. ಜಿಲ್ಲೆಯಲ್ಲಿ ಅಂಟುರೋಗ ನಿಯಂತ್ರಣಕ್ಕೆ ಸಾರ್ವಜನಿಕರು ಸರ್ವ ಸಹಕಾರ ನೀಡುವಂತೆ ಜಿಲ್ಲಾ ವೈದ್ಯಾಧಿಕಾರಿ ವಿನಂತಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries