ಕಾಸರಗೋಡು: ಕೋವಿಡ್ ಅವಧಿಯ ಅನೇಕ ಸಂಕಷ್ಟ ಗಳಲ್ಲಿ ಸೋಂಕು ಬಾಧೆಯಿಂದ ಕೊನೆಯುಸಿರೆಳೆದವರ ಮೃತದೇಹ ಸಂಸ್ಕಾರವೂ ಒಂದು. ಈ ಸಂಬಂಧ ದೇಶದ ಕೆಲೆವಡೆ ನಡೆಯುತ್ತಿರುವ ಚಟುವಟಿಕೆಗಳು ವ್ಯಾಪಕ ವಿರೋಧಕ್ಕೂ ಕಾರಣವಾಗುತ್ತಿವೆ. ಆದರೆ ಕೇರಳ ರಾಜ್ಯ ಸರಕಾರದ ನೇತೃತ್ವದಲ್ಲಿ ಆರೋಗ್ಯ ಇಲಾಖೆಯು ಈ ಸಂಬಂಧ ಸಂದಿಗ್ದತೆ ಪರಿಹರಿಸಿಕೊಂಡು ಕರ್ಯಪ್ರವೇತ್ತವಾಗಿದೆ. ಕೋವಿಡ್ ಪ್ರತಿರೋಧ ಸಂಹಿತೆ ಗಳನ್ನು ಮೀರದೆಯೇ ಪೂರ್ಣ ಚಟುವಟಿಕೆಗಳಲ್ಲಿ ನಿರತವಾಗಿರುವ ಆರೋಗ್ಯ ಇಲಾಖೆ ಮುಕ್ತ ಪ್ರಶಂಸೆಗೆ ಭಾಜನವಾಗುತ್ತಿದೆ.
ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಇಡೀ ನಾಡು ಸತತ ಯತ್ನ ನಡೆಸುತ್ತಿದೆ. ಇಡೀ ದೇಶದಲ್ಲಿ ಕೋವಿಡ್ ಸೋಂಕು ನಿಯಂತ್ರಣ ಮೀರಿ ಹರಡುತ್ತಿದೆ. ಚಿಕ್ಕದೊಂದು ಲೋಪವೂ ಬೃಹತ್ ಸಾಮಾಜಿಕ ದುರಂತಕ್ಕೆ ಕದತೆರೆಯುವ ಭೀತಿಯಲ್ಲಿ ಸಮಾಜ ಮುಂದುವರಿಯುತ್ತಿದೆ. ಈ ಸಂದರ್ಭ ಪ್ರತಿರೋಧದ ಮುಂದಿನ ಹಂತಕ್ಕೆ ಆರೋಗ್ಯ ಇಲಾಖೆ ಹೆಜ್ಜೆಯಿರಿಸುವ ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕೊನೆಯುಸಿರೆಳೆದವರ ಮೃತದೇಹಗಳ ಸಂಬಂಧ ಕಾರ್ಯಗಳು, ಅಂತ್ಯಸಂಸ್ಕಾರ ಸಹಿತ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ವಿಶ್ವ ಆರೋಗ್ಯ ಸಂಘಟನೆ ತಿಳಿಸಿರುವ ಅಷ್ಟೂ ಮಾನದಂಡಗಳನ್ನು ಚಾಚೂ ತಪ್ಪದೆ ಕೇರಳ ಆರೋಗ್ಯ ಇಲಾಖೆ ಕೋವಿಡ್ ಬಾಧಿಸಿ ಇನ್ನಿಲ್ಲವಾದವರ ಮೃತದೇಹಗಳ ಸಂಬಂಧ ಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ತಿಳಿಸಿದರು.
ಎಲ್ಲ ಸೌಲಭ್ಯಗಳನ್ನೂ ಬಳಸಿ ಕೋವಿಡ್ ಮರಣ ಸಂಭವಿಸದಂತೆ ಚಿಕಿತ್ಸೆ ಒದಗಿಸುವ ಕ್ರಮಗಳಿಗೆ ರಾಜ್ಯ ಸರಕಾರ ಆದ್ಯತೆ ನೀಡುತ್ತಿದೆ. ಇದೇ ವೇಳೆ ಎಲ್ಲ ಯತ್ನಗಳೂ ವಿಫಲವಾಗಿ ರೋಗಿ ಕೊನೆಯುಸಿರೆಳೆದರೆ, ಈ ವ್ಯಕ್ತಿಯಿಂದ ಯಾವ ಕಾರಣಕ್ಕೂ ಇತರರಿಗೆ ರೋಗ ಹರಡದಂತೆ ಅತೀವ ಜಾಗರೂಕತೆ ನಡೆಸಲಾಗುತ್ತಿದೆ ಎಂದವರು ನುಡಿದರು.
ಮೃತದೇಹ ಸಂಸ್ಕಾರ ಸಂಹಿತೆ:
ಸೋಂಕು ಸಂಬಂಧ ಸಂಶಯಾಸ್ಪದವಾಗಿರುವ ಸಾವುಗಳಲ್ಲಿ ಕೋವಿಡ್ ತಪಾಸಣೆ ನಡೆಸಿದ ನಂತರ ಮಾತ್ರ ಸಂಸ್ಕಾರಕ್ಕಾಗಿ ಮೃತದೇಹಗಳು ಲಭ್ಯವಾಗುವುವು. ಕೋವಿಡ್ ಸೋಂಕು ಖಚಿತಗೊಂಡಿದ್ದ ವ್ಯಕ್ತಿಯ ಮೃತದೇಹ ಸಂಬಂಧ ಮುಂದಿನ ಕ್ರಮಗಳಿಗೆ ಸಂಬಂಧಿಸಿ ಅಂತಾರಾಷ್ಟ್ರ ಆರೋಗ್ಯ ಸಂಸ್ಥೆಯ ಮಾನದಂಡ ಪ್ರಕಾರ ಕೇಂದ್ರ ಆರೋಗ್ಯ ಮಂತ್ರಾಲಯ ಕಟ್ಟುನಿಟ್ಟುಗಳನ್ನು ಪ್ರಕಟಿಸಿದೆ.
ಮರಣೋತ್ತರ ಪರೀಕ್ಷೆ ವರೆಗಿನ ಎಲ್ಲ ಚಟುವಟಿಕೆಗಳನ್ನೂ ಪರಿಣತ ವೈದ್ಯರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ನೇರ ಮೇಲ್ನೋಟದಲ್ಲಿ ಪೂರ್ಣಗೊಳಿಸಲಾಗುವುದು. ತದಂತರ ಮೃತದೇಹವನ್ನು ಎಲ್ಲ ಸಜ್ಜೀಕರಣಗಳೊಂದಿಗೆ ಅಂತಿಮ ಸಂಸ್ಕಾರ ಕೇಂದ್ರಗಳಿಗೆ ಒಯ್ಯಲಾಗುವುದು. ಈ ವೇಳೆ ಮೃತದೇಹವನ್ನು ವಿಶೇಷ ಪ್ಲಾಸ್ಟಿಕ್ ಹೊದಕೆಯಲ್ಲಿ ಭದ್ರವಾಗಿ ಮುಚ್ಚಿ ಆಂಬುಲೆನ್ಸ್ ಮೂಲಕ ಅಂತಿಮ ಸಂಸ್ಕಾರ ಕೇಂದ್ರಕ್ಕೆ ತರಲಾಗುವುದು.
ಮೃತದೇಹ ಹಸ್ತಾಂತರವಿಲ್ಲ:
ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದರೆ , ಸೋಂಕು ಇತರರಿಗೆ ಹರಡುವ ಭೀತಿಯ ಹಿನ್ನೆಲೆಯಲ್ಲಿ ಮನೆಗಳಿಗೆ ತಲಪಿಸುವುದು, ನೇರ ಹಸ್ತಾಂತರ ನಡೆಸುವುದು ಇತ್ಯಾದಿ ನಡೆಸುವುದಿಲ್ಲ. ಆಯ್ಯಂಬುಲೆನ್ಸ್ ನಲ್ಲೂ ಮೃತದೇಹದ ಜೊತೆಗೆ ಇತರ ಯಾರೂ ಇರಕೂಡದು. ಪಿ.ಪಿ.ಇ.(ಪರ್ಸನಲ್ ಪೆÇ್ರಟೆಕ್ಟಿವ್ ಎಕ್ಯೂಪ್ ಮೆಂಟ್) ಕಿಟ್ ಧಾರಣೆಯೊಂದಿಗೆ ಚಾಲಕ ಮಾತ್ರ ಈ ವಾಹನದಲ್ಲಿ ಇರುವರು.
ಪಿ.ಪಿ.ಇ.ಕಿಟ್ ಧಾರಣೆ ವಿಧಾನ:
ಅಂತಿಮ ಸಂಸ್ಕಾರ ನಡೆಸುವ ವ್ಯಕ್ತಿಗಳು ಕೈಗಳಿಗೆ ಸಾನಿಟೈಸರ್ ಹಾಕಿ ಉಜ್ಜಿಕೊಂಡ ನಂತರ ಮೂರು ಲೇಯರ್ ಗಳಿಗೆ ಮಾಸ್ಕ್ ಮುಖಕ್ಕೆ ಧರಿಸಬೇಕು. ನಂತರ ಕೈಗಳಿಗೆ ಗ್ಲೌಸ್ ಧರಿಸಬೇಕು. ಕೊರಳು ಮತ್ತು ಅದರ ಕೆಳಗಿನ ಭಾಗವನ್ನು ವಾಯುಸಂಚಾರ ನಡೆಯದಂತೆ ಭದ್ರವಾಗಿ ಪ್ಲಾಸ್ಟರ್ ಬಳಸಿ ಭದ್ರವಾಗಿಸಬೇಕು. ನಂತರ ಕಾಲುಗಳು ಪೂರ್ಣರೂಪದಲ್ಲಿ ಮುಚ್ಚಿಕೊಳ್ಳುವ ರೀತಿ ಕಾಲು ಕವಚಗಳನ್ನು ಧರಿಸಬೇಕು.
ಮೃತದೇಹಕ್ಕೆ ಅಗ್ನಿಸ್ಪರ್ಶ ಮೂಲಕ ಸಂಸ್ಕಾರ ನಡೆಸುವುದಿದ್ದಲ್ಲಿ, ಪಿ.ಪಿ.ಇ. ಕಿಟ್ ಧರಿಸಿದ ಮಂದಿ ಮಾತ್ರ ಮೃತದೇಹವನ್ನು ಆಂಬುಲೆನ್ಸ್ ನಿಂದ ಎತ್ತಿ ಒಯ್ಯಬೇಕು.
ದಫನ ಮೂಲಕ ಅಂತಿಮ ಸಂಸ್ಕಾರ ನಡೆಸುವುದಿದ್ದಲ್ಲಿ ಹತ್ತು ಅಡಿ ಆಳದಲ್ಲಿ ಗುಂಡಿ ತೋಡಬೇಕು. ಇದರಲ್ಲಿ ಕನಿಷ್ಠ 6 ಕಿಲೋ ಬ್ಲೀಚಿಂಗ್ ಪ್ಲೌಡರ್ ಚಿಮ್ಮ ಬೇಕು. ಸಂಸ್ಕಾರ ನಡೆಸಿ ಮಣ್ಣು ಮುಚ್ಚಬೇಕು.
ಸಂಸ್ಕಾರದ ನಂತರ ಅದರಲ್ಲಿ ನೇರವಾಗಿ ಭಾಗಿಯಾದ ಪಿ.ಪಿ.ಇ. ಕಿಟ್ ಧಾರಿಗಳು ತಾವು ತೊಟ್ಟುಕೊಂಡಿದ್ದ ಕವಚಗಳನ್ನು ಒಳಭಾಗದಿಂದ ಮಡಚಿಕೊಳ್ಳಬೇಕು. ಯಾವ ಕಾರಣಕ್ಕೂ ಹೊರಭಾಗನ್ನು ಸ್ಪರ್ಶಿಸಬಾರದು. ಕಿಟ್ ನ ಎಲ್ಲ ವಸ್ತುಗಳನ್ನೂ, ವ್ಯಕ್ತಿ ತಾನು ಧರಿಸಿದ ಒಳ ಉಡುಪುಗಳ ಸಹಿತ ಎಲ್ಲ ಬಟ್ಟೆಗಳನ್ನೂ ಮಣ್ಣಿನ ಗುಂಡಿ ತೋಡಿ ಮುಚ್ಚಬೇಕು. ಈ ವೇಳೆಯೂ ಎಲ್ಲಾ ಸುರಕ್ಷಾ ಕವಚಗಳನ್ನು ಧರಿಸಿಕೊಳ್ಳಬೇಕು. ತದನಂತರ ಸಂಸ್ಕಾರ ನಡೆಸಿದ ಪ್ರದೇಶದ ಬಳಿಯೇ ಇವರಿಗೆ ಶುಚಿಯಾಗಿ ಸ್ನಾನಮಾಡಿಕೊಳ್ಳುವ ಎಲ್ಲ ಸಜ್ಜೀಕರಣ ಇರಬೇಕು.
ಅಂತಿಮ ಸಂಸ್ಕಾರ ನಡೆಸುತ್ತಿದ್ದ ವೇಳೆ ಪ್ರತ್ಯಕ್ಷ ಭಾಗಿ ಕಾರ್ಯಕರ್ತರಿಗೆ ಉಸಿರಾಟದ ತೊಂದರೆ, ತಲೆಸುತ್ತು ಇತ್ಯಾದಿ ತಲೆದೋರಿದಲ್ಲಿ ತಕ್ಷಣ ಮರಳಬೇಕು. ಅಂತಿಮ ಸಂಸ್ಕಾರ ನಡೆದಿರುವ ಪ್ರದೇಶಕ್ಕೆ ಕನಿಷ್ಠ 7 ದಿನಗಳ ವರೆಗೆ ಯಾರೂ ಹೋಗಕೂಡದು.
ಸಾರ್ವಜನಿಕರಿಗೆ ಸೂಚನೆ:
ಆರೋಗ್ಯ ಇಲಾಖೆ ತಿಳಿಸಿರುವ ಕಟ್ಟುನಿಟ್ಟುಗಳನ್ನು ಯಥಾವತ್ತಾಗಿ ಪಾಲಿಸುವ ಮೂಲಕ ಮತ್ತು ಕೋವಿಡ್ ಮಾನದಂಡಗಳ ಮೂಲಕ ಮೃತದೇಹ ಸಂಸ್ಕಾರಕ್ಕೆ ಸಾರ್ವಜನಿಕರು ಸಹಕಾರ ನೀಡಿ ಬೆಂಬಲಿಸುವಂತೆ ಆರೋಗ್ಯ ಮೇಲ್ವಿಚಾರಕ ವಿನಂತಿಸಿರುವರು.
ಆರೋಗ್ಯ ಇಲಾಖೆ ಪ್ರಕಟಿಸಿರುವ ಸಂಹಿತೆ ಯನ್ನು ಕಡ್ಡಾವಾಗಿ ಪಾಲಿಸಬೇಕಾದುದು ಎಲ್ಲರ ಕರ್ತವ್ಯವಾಗಿದ್ದು, ನಾಡಿನ ಸುರಕ್ಷೆಗೆ ಅನಿವಾರ್ಯ ಎಂದವರು ನುಡಿದರು.
ಮರಣ ಸಂಭವಿಸಿದಲ್ಲಿ ಇತರರಿಗೆ ಸಂಭವಿಸಬಹುದಾದ ಭಾವನಾತ್ಮಕ ವ್ಯತ್ಯಯಗಳ ಹಿನ್ನೆಲೆಯಲ್ಲಿ ಸ್ವಯಂನಿಯಂತ್ರಣ ಕೊಂಚ ಕಷ್ಟಕರವಾಗಬಹುದು. ಆದರೂ ಸಾಮಾಜಿಕ ಹೊಣೆಯ ಹಿನ್ನೆಲೆಯಲ್ಲಿ ಎಲ್ಲರೂ ಸಂಯಮ ಪಾಲಿಸಬೇಕಾದುದು ಅನಿವಾರ್ಯ. ಕೆಲವು ಸಂದರ್ಭಗಳಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಯಥಾವತ್ತಾಗಿ ನಡೆಸಲು ಕಷ್ಟವಾಗಬಹುದು. ಇಂಥಾ ಅನೇಕ ವಿಚಾರಗಳಲ್ಲಿ ಸಹೃದಯರಾದ ಸಾರ್ವಜನಿಕರ ಪೂರ್ಣ ಬೆಂಬಲ ಅನಿವಾರ್ಯವಾಗಿದೆ ಎಂದು ಅವರು ವಿನಂತಿಸಿರುವರು.




