ಕಾಸರಗೋಡು: ಅತ್ಯಾಧುನಿಕ ಸೌಕರ್ಯಗಳಿಂದ ಕೂಡಿದ ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯಾಲಯ ಜುಲೈ 12 ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ,
ತಾಳಿಪಡ್ಪು ಶ್ರೀ ನಾರಾಯಣ ಗುರು ರಸ್ತೆಯಲ್ಲಿ ಆರ್‍ಎಸ್‍ಎಸ್ ಕಾರ್ಯಾಲಯದ ಮುಂಭಾಗದಲ್ಲಿ ನಿರ್ಮಿಸಿದ ಕಟ್ಟಡವನ್ನು ವಚ್ರ್ಯುವಲ್ ಮೀಟ್ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಉದ್ಘಾಟಿಸುವರು.
ಕೇಂದ್ರ ಸಚಿವ ವಿ.ಮುರಳೀಧರನ್, ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್, ಸಿ.ಕೆ.ಪದ್ಮನಾಭನ್, ಪಿ.ಕೆ.ಕೃಷ್ಣದಾಸ್ ಮೊದಲಾದವರು ಉಪಸ್ಥಿತರಿರುವರೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಾಲಯದಲ್ಲಿ ಕನ್ನಡ, ಮಲಯಾಳ, ಇಂಗ್ಲೀಷ್ ಭಾಷೆಯ ಗ್ರಂಥಗಳ ಭಂಡಾರ ಇದೆ. ಕಾರ್ಯಾಲಯ ಕಾರ್ಯದರ್ಶಿ, ಪದಾ„ಕಾರಿಗಳು, ವಿವಿಧ ಮೋರ್ಚಾಗಳಿಗೂ ವಿಶೇಷ ಸೌಕರ್ಯಗಳಿವೆ. ವಿಶಾಲವಾದ ಕಾನರೆನ್ಸ್ ಹಾಲ್, ಮುಖಂಡರಿಗೆ ಉಳಕೊಳ್ಳಲು ಎರಡು ಕೊಠಡಿಗಳಿವೆ ಎಂದು ಡಾ|ಶ್ಯಾಂ ಪ್ರಸಾದ್ ಮುಖರ್ಜಿ ಮಂದಿರ ನಿರ್ಮಾಣ ಸಮಿತಿ ಸಂಚಾಲಕ ಪಿ.ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ ತಿಳಿಸಿದರು.


