ಕಾಸರಗೋಡು: ಜಿಎಚ್‍ಎಸ್‍ಎಸ್ ಕಾಸರಗೋಡು ಶಾಲೆಗೆ ಕಿಫ್‍ಬಿ ನೆರವಿನೊಂದಿಗೆ ಮಂಜೂರು ಮಾಡಿದ ಕಟ್ಟಡ ನಿರ್ಮಾಣ ಉದ್ಘಾಟನೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವೀಡಿಯೋ ಕಾನರೆನ್ಸ್ ಮೂಲಕ ನೆರವೇರಿಸಿದರು.
ಈ ಸಂಬಂಧ ನಡೆದ ಸಭೆಯಲ್ಲಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮಾತನಾಡಿದರು. ನಗರಸಭಾ ಅಧ್ಯಕ್ಷೆ ಬಿಫಾತಿಮ್ಮಾ ಇಬ್ರಾಹಿಂ, ಕಾಸರಗೋಡು ಡಿಡಿಇ ಕೆ.ವಿ.ಪುಷ್ಪ, ಡಿಇಒ ಎನ್.ನಂದಿಕೇಶನ್, ಎಇಒ ಅಗಸ್ಟಿನ್ ಬರ್ನಾಡ್, ಪಿಟಿಎ ಅಧ್ಯಕ್ಷ ಸಿ.ಎಂ.ಎ.ಜಲೀಲ್, ಎಸ್.ಡಿ.ಸಿ. ಅಧ್ಯಕ್ಷ ಅಬ್ಬಾಸ್ ಬೀಗಂ, ಎಸ್.ಎಂ.ಸಿ. ಅಧ್ಯಕ್ಷ ಎ.ಎಸ್.ಅಹಮ್ಮದ್, ಕೆ.ಸಿ.ಡಿ.ಸಿ. ಪ್ರತಿನಿ„ ಫಾಯಿಸ್ ಮಣಪ್ಪುರತ್, ಪ್ರಾಂಶುಪಾಲೆ ಗೀತಾ ಜಿ.ತೋಪ್ಪಿಲ್, ಮುಖ್ಯೋಪಾಧ್ಯಾಯಿನಿ ಬಿ.ಕುಸುಮ, ಡೋಮಿನಿಕ್ ಅಗಸ್ಟಿನ್, ಸ್ಟಾಫ್ ಸೆಕ್ರೆಟರಿ ಮಧು ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.

