ಮಧೂರು: ಕೋಟೆಕಣಿಯ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಸ್ವಾಮಿ ವಿವೇಕಾನಂದರ ಛದ್ಮವೇಷ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯು ಜೂನಿಯರ್ ವಿಭಾಗ(3 ವರ್ಷದಿಂದ 6 ವರ್ಷದ ವರೆಗೆ), ಸೀನಿಯರ್ ವಿಭಾಗ (7 ವರ್ಷದಿಂದ 11 ವರ್ಷದ ವರೆಗೆ) ನಡೆಯುವುದು. ಛದ್ಮ ವೇಷದ ಫೆÇೀಟೋವನ್ನು 9495237670 ವಾಟ್ಸಾಪ್ ನಂಬ್ರಕ್ಕೆ ಕಳುಹಿಸಬೇಕು. ಸ್ಪರ್ಧೆಗೆ ಒಂದೇ ಫೆÇೀಟೋ ಮಾತ್ರವೇ ಕಳುಹಿಸಬೇಕು. ಕೊನೆಯ ದಿನಾಂಕ ಜುಲೈ 26 ಆಗಿರುತ್ತದೆ. ಫಲಿತಾಂಶ ಆ.3 ರಕ್ಷಾ ಬಂಧನದ ದಿನ ಪ್ರಕಟಿಸಲಾಗುವುದು. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗು ತೃತೀಯ ಬಹುಮಾನ ಹಾಗು ಅಭಿನಂದನಾ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 9037237670, 7736374407 ನಂಬ್ರವನ್ನು ಸಂಪರ್ಕಿಸಬಹುದು.



