ತಿರುವನಂತಪುರ: ನಿನ್ನೆ ಸಂಜೆಯ ವರೆಗೆ ರಾಜ್ಯದಲ್ಲಿ ಕೋವಿಡ್ ಕ್ವಾರಂಟೈನ್ ನಲ್ಲಿ 1.56,576 ಮಂದಿ ಕ್ವಾರಂಟೈನ್ ನಲ್ಲಿರುವರೆಂದು ಅಂಕಿಅಂಶಗಳು ದೃಢಪಡಿಸಿವೆ. ನಿನ್ನೆ ರೋಗ ಬಾಧಿತರ ಪೈಕಿ 111 ಮಂದಿ ಗುಣಮುಖರಾದರು. ಆದರೆ ಸಂಪರ್ಕ-ಸಂಬಂಧಿತ ಕೋವಿಡ್ ಪ್ರಕರಣಗಳು ಕಳವಳವನ್ನು ಹೆಚ್ಚಿಸಿವೆ. ಕೋವಿಡ್ ರಾಜ್ಯದಲ್ಲಿ ಅಸಾಧಾರಣ ಸನ್ನಿವೇಶಗಳತ್ತ ಸಾಗುತ್ತಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವರು. ಕೋವಿಡ್ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೋವಿಡ್ ಪ್ರಕರಣಗಳ ಹೆಚ್ಚಳದೊಂದಿಗೆ, ಕ್ವಾರಂಟೈನ್ ನಲ್ಲಿ ಇರುವ ಜನರ ಸಂಖ್ಯೆಯೂ ಹೆಚ್ಚಿದೆ.
ಕ್ವಾರಂಟೈನ್ ಅಂಕಿ-ಅಂಶ:
ಕೋವಿಡ್ ಕ್ವಾರಂಟೈನ್ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ನಿನ್ನೆಯ ವರೆಗೆ 1,86,576 ಕ್ಕೆ ಬಂದು ತಲಪಿದೆ. ನಿನ್ನೆಯೊಂದೇ ದಿನ 378 ಮಂದಿಗಳನ್ನು ಕೋವಿಡ್ ಸಂಶಯದ ಹನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತು ವಿವಿಧ ಆಸ್ಪತ್ರೆಗಳಲ್ಲಿ 3034 ಮಂದಿ ಸೋಂಕು ಭಾದಿತ ರೋಗಿಗಳಿದ್ದಾರೆ. 75 ಗಂಟೆಗಳ ಮಾದರಿಗಳನ್ನು 24 ಗಂಟೆಗಳಲ್ಲಿ ಪರಿಶೀಲಿಸಲಾಯಿತು. ಸಂಪರ್ಕದ ಮೂಲಕ ಕೋವಿಡ್‍ನ ಹೆಚ್ಚಿನ ಪ್ರಕರಣಗಳು ವರದಿಯಾದ ದಿನ ನಿನ್ನೆಯಾಗಿದ್ದು ರಾಜ್ಯದಲ್ಲಿ 18 ಹೊಸ ಹಾಟ್ ಸ್ಪಾಟ್‍ಗಳನ್ನೂ ಘೋಶಿಸಲಾಗಿದೆ. ಇದರೊಂದಿಗೆ ಒಟ್ಟು ಹಾಟ್ ಸ್ಪಾಟ್‍ಗಳ ಸಂಖ್ಯೆ 169 ಕ್ಕೆ ಏರಿದೆ. ನಿನ್ನೆ ರೋಗನಿರ್ಣಯ ಮಾಡಿದವರಲ್ಲಿ 7 ಮಂದಿ ಆರೋಗ್ಯ ಕಾರ್ಯಕರ್ತರು. 1 ಸಿಐಎಸ್ ಎಫ್ ಜವಾನರೂ, ಓವರ್ವ ಡಿಎಸ್ಸಿ ಜವಾನನೂ ಒಳಗೊಂಡಿದ್ದಾರೆ.
ವಿವಿಧಡೆಗಳಿಂದ ಆಗಮಿಸಿದವರ ವಿವರ:
ನಿನ್ನೆ ಕೋವಿಡ್ ದೃಢಪಟ್ಟವರಲ್ಲಿ 157 ಮಂದಿ ವಿದೇಶದಿಂದ ಬಂದವರು. 38 ಜನರು ಕೇರಳಕ್ಕೆ ಇತರ ರಾಜ್ಯಗಳಿಂದ ಬಂದರು.ಈ ಪೈಕಿ 15 ಜನರ ಸೋಂಕು ಮೂಲ ಸ್ಪಷ್ಟವಾಗಿಲ್ಲ ಎಂದು ಸಿಎಂ ಹೇಳಿರುವರು. ಲಾಕ್ ಡೌನ್ ಘೋಷಿಸಿದ ನಂತರ, ಸುಮಾರು ಐದು ಲಕ್ಷ ಜನರು ಕೇರಳಕ್ಕೆ ಹೊರರಾಜ್ಯ ಮತ್ತು ವಿದೇಶಗಳಿಂದ ಆಗಮಿಸಿದವರಾಗಿರುವರು. ಶೇ.62.88 ರಷ್ಟು ಜನರು ದೇಶದೊಳಗಿನವರು. ದೇಶೀಯ ಪ್ರಯಾಣಿಕರಲ್ಲಿ ಸುಮಾರು 65 ಪ್ರತಿಶತ ಜನರು ಕೆಂಪು ವಲಯದಿಂದ ಬಂದವರು. ಹಿಂದಿರುಗಿದವರಲ್ಲಿ ಹೆಚ್ಚಿನವರು ಮಲಪ್ಪುರಂ ಜಿಲ್ಲೆಯವರಾಗಿರುವುದೂ ಗಮನಾರ್ಹ. ರಾಜ್ಯದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಹೊರಗಿಂದ ಬಂದ ಜಿಲ್ಲೆ ಎಂದರೆ ವಯಡು(12,652). ಕೇರಳಕ್ಕೆ ಅತಿ ಹೆಚ್ಚು ಆಗಮಿಸಿದವರು ತಮಿಳುನಾಡಿನಿಂದ (97,570), 88,031 ಮಂದಿ ಕರ್ನಾಟಕದಿಂದ ಬಂದವರಾಗಿರುವರು. ರಾಷ್ಟ್ರೀಯ ಮಟ್ಟದ ಅಂಕಿ ಅಂಶಗಳ ಪ್ರಕಾರ ಸುಮಾರು ಶೇ.75 ಹೊರರಾಜ್ಯಗಳಿಂದ ಬಂದವರು.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆತಂಕವಿದೆ ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು. ಸಂಪರ್ಕದ ಮೂಲಕ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದೂ ಆತಂಕಕಾರಿ, ಈ ಬಗ್ಗೆ ಜಾಗರೂಕತೆ ಆವಶ್ಯ ಎಂದು ಮುಖ್ಯಮಂತ್ರಿ ತಿಳಿಸಿರುವರು. ರೋಗಿಗಳೊಂದಿಗೆ ಸಾಕಷ್ಟು ದೂರವಿರುವುದು ಅವಶ್ಯಕ. ಸಮರ್ಪಕ ಭದ್ರತೆಯ ಕೊರತೆಯು ಹಿನ್ನಡೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.


