ತಿರುವನಂತಪುರ: ನಿನ್ನೆ ಒಂದೇ ದಿನ 272 ಕೋವಿಡ್ ಸೋಂಕು ದೃಢಪಟ್ಟಿರುವುದು ಅಪಾಯಕಾರಿ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುದ್ದಿಗಾರರೊಂದಿಗೆ ಮಾತನಾಡಿ 272 ರೋಗಿಗಳಲ್ಲಿ 68 ರೋಗಗಳಿಗೆ ಸೋಂಕು ಹರಡಿದ ಮೂಲ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅತಿ ಜಾಗ್ರತೆ ಬೇಕು ಎಂದು ಸೂಚಿಸಿದರು.
ಹಿರಿಯ ಪೆÇಲೀಸ್ ಅಧಿಕಾರಿಗಳು ಕ್ವಾರಂಟೈನ್ ನಲ್ಲಿರುವವರ ಮನೆ ತಪಾಸಣೆ ನಡೆಸುವರು. ಇಂತಹ ಮಿಂಚಿನ ಪರೀಕ್ಷೆಯಲ್ಲಿ ಕಾನೂನು ಉಲ್ಲಂಘನೆ ಕಂಡರೆ ಉಗ್ರ ಶಿಕ್ಷೆ ನೀಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ರೋಗ ಹರಡುವುದನ್ನು ತಡೆಗಟ್ಟಲು 'ಬ್ರೇಕ್ ದಿ ಚೈನ್' ಪ್ರಕ್ರಿಯೆ ಇನ್ನಷ್ಟು ಬಲಪಡಿಸಬೇಕು. ಟ್ರಿಪಲ್ ಲಾಕ್-ಡೌನ್ ಸೇರಿದಂತೆ ಕಠಿಣ ಕಾನೂನು ಕ್ರಮಗಳನ್ನು ಅಗತ್ಯವಿದ್ದರೆ ಹೇರಲಾಗುವುದು ಎಂದು ಸಿಎಂ ಎಚ್ಚರಿಸಿದ್ದಾರೆ.
ಹಾಟ್ ಸ್ಪಾಟ್ ಪಟ್ಟಿಗೆ 18 ಹೊಸ ಪ್ರದೇಶಗಳನ್ನು ಸೇರಿಸಲಾಗಿದೆ. ಇದರೊಂದಿಗೆ, ಒಟ್ಟು ಹಾಟ್‍ಸ್ಪಾಟ್‍ಗಳ ಸಂಖ್ಯೆ 272 ಕ್ಕೆ ಏರಿದೆ.
ಮಲಪ್ಪುರಂ ಜಿಲ್ಲೆಯಲ್ಲಿ ನಿನ್ನೆ ಅತಿ ಹೆಚ್ಚು ಸೋಂಕಿತರು ಕಂಡುಬಂದಿದ್ದಾರೆ.


