ತಿರುವನಂತಪುರ: ಕೋಲಾಹಲ ಸೃಷ್ಟಿಸಿರುವ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ಸ್ವಪ್ನಾ ಸುರೇಶ್ ಅವರ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಐಟಿ ಕಾರ್ಯದರ್ಶಿಯಿಂದ ಸ್ಪಷ್ಟನೆ ಕೇಳುವ ಸಾಧ್ಯತೆ ಇದೆ. ಕಾನ್ಸುಲೇಟ್‍ನಿಂದ ವಜಾ ಮಾಡಲ್ಪಟ್ಟ ಸ್ವಪ್ನಾ ಸುರೇಶ್ ಅವರನ್ನು ಐಟಿ ಇಲಾಖೆಯು ನೇಮಕ ಮಾಡಿಕೊಂಡ ವಿದ್ಯಮಾನಕ್ಕೆ ಸಂಬಂಧಿಸಿ ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಐಟಿ ಕಾರ್ಯದರ್ಶಿಗಳಿಂದ ಸಮಗ್ರ ಸ್ಪಷ್ಟನೆಯನ್ನು ಕೇಳಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ.
ಆರೋಪಿ ಸ್ವಪ್ನಾರಿಗೆ ಐಟಿ ಕಾರ್ಯದರ್ಶಿಯೊಂದಿಗೆ ನಿಕಟ ಸಂಬಂಧವಿದೆ ಎಂದು ಈ ಹಿಂದೆ ವರದಿಯೊಂದು ಹೊರಬಿದ್ದಿತ್ತು. ಈ ನೇಮಕಾತಿ ಬಗ್ಗೆ ತನಗೆ ತಿಳಿದಿಲ್ಲ ಎಂದು ಮುಖ್ಯಮಂತ್ರಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು, ಆದರೆ ಐಟಿ ಕಾರ್ಯದರ್ಶಿ ಅವರ ವಿರುದ್ಧದ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೆಎಸ್‍ಐಟಿಎಲ್ ಅಡಿಯಲ್ಲಿ ಸ್ವಪ್ನ ಅವರು ಮಾರ್ಕೆಟಿಂಗ್ ಆಫೀಸರ್ ಆಗಿದ್ದರು.ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗಿಯಾಗಿದ್ದ ಅವರನ್ನು ಚಿನ್ನ ಸಾಗಾಟದ ಆರೋಪದ ಹಿನ್ನೆಲೆಯಲ್ಲಿ ಸೋಮವಾರ ಹುದ್ದೆಯಿಂದ ವಜಾಗೊಳಿಸಲಾಯಿತು. ತಿರುವನಂತಪುರಂನ ಮುದವನ್ಮುಗಳಿಲ್ ಲ್ಲಿರುವ ಅವರ ಫ್ಲ್ಯಾಟ್ ಗೆ ದಿನನಿತ್ಯವೆಂಬಂತೆ ಐಟಿ ಕಾರ್ಯದರ್ಶಿ ಭೇಟಿ ನೀಡುತ್ತಿದ್ದರೆಂದು ಬಲ್ಲಮೂಲಗಳಿಂದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸ್ವಪ್ನಾ ಹಾಗೂ ಐಟಿ ಕಾರ್ಯದರ್ಶಿಗಳಿಗೆ ನಿಕಟ ಸಂಬಂಧವಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಆದರೆ, ಯಾವುದೇ ಆರೋಪಗಳಿಗೆ ಐಟಿ ಕಾರ್ಯದರ್ಶಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಐಟಿ ಇಲಾಖೆಯ ಉಸ್ತುವಾರಿ ವಹಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಐಟಿ ಕಾರ್ಯದರ್ಶಿಯಿಂದ ವಿವರಣೆ ಪಡೆಯಲಿದ್ದಾರೆ ಎಂದು ವರದಿಗಳು ತಿಳಿಸಿವೆ.