ಕಾಸರಗೋಡು: ಕೋವಿಡ್ 19 ಸೋಂಕು ಸಂಬಂಧ ಎರಡೇ ತಾಸುಗಳಲ್ಲಿ ಸ್ಯಾಂಪಲ್ ತಪಾಸಣೆಯ ಫಲಿತಾಂಶ ಅರಿಯಬಲ್ಲ ಟ್ರೂನಾಟ್ ಟೆಸ್ಟ್ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಯಲ್ಲಿ ಆರಂಭಗೊಂಡಿದೆ. ಇನ್ನು ಮುಂದೆ ಶಂಕಿತರ ಸ್ಯಾಂಪಲ್ ತಪಾಸಣೆಯ ಫಲಿತಾಂಶಕ್ಕಾಗಿ ಹಿಂದಿನಂತೆ ಕಾದುಕುಳಿತುಕೊಳ್ಳಬೇಕಾಗಿಲ್ಲ.
ಇಬ್ಬರು ಇರುವ ಮೂರು ಬ್ಯಾಚ್ ತಪಾಸಣೆಯ ಮೂಲಕ 6 ಮಂದಿಯ ತಪಾಸಣೆ ಪ್ರತಿದಿನ ನಡೆಸಬಹುದಾಗಿದೆ. ಈ ನಿಟ್ಟಿನಲ್ಲಿ ಎರಡು ಯಂತ್ರಗಳ ಚಟುವಟಿಕೆ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಗಂಟಲರಸವನ್ನು ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲಾಗುತ್ತದೆ. ದಾಖಲಾತಿ ಪಡೆದ ರೋಗಿಗಳೂ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೂ, ಮೃತದೇಹದ ಸ್ಯಾಂಪಲ್ ತಪಾಸಣೆಯೂ ಈ ತಾಂತ್ರಿಕತೆಯ ಮೂಲಕ ಸಾಧ್ಯವಾಗಲಿದೆ.
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಜೂ.27ರಂದು ಟೆಸ್ಟ್ ನ ಟ್ರಯಲ್ ರನ್ ನಡೆಸಲಾಗಿತ್ತು. ಟ್ರಯಲ್ ಅವಧಿಯಲ್ಲಿ ಪಡೆದಿದ್ದ ಸ್ಯಾಂಪಲ್ ತಪಾಸಣೆಯ ಫಲಿತಾಂಶ ನೆಗೆಟಿವ್ ಆಗಿತ್ತು. ಟ್ರೂನಾಟ್ ಟೆಸ್ಟ್ ನ ಪ್ರಥಮ ಗಂಟಲರಸ ತಪಾಸಣೆ ಶನಿವಾರ ನಡೆಯಿತು. ದಾಖಲಾತಿ ಚಿಕಿತ್ಸೆ ಪಡೆಯುತ್ತಿರುವ ಮೂವರು ರೋಗಿಗಳ ಸ್ಯಾಪಲ್ ಈ ವೇಳೆ ತಪಾಸಣೆಗೊಳಪಡಿಸಲಾಗಿದೆ. ಇವರ ಫಲಿತಾಂಶ ನೆಗೆಟಿವ್ ಆಗಿದೆ ಎಂದು ಆಸ್ಪತ್ರೆಯ ವರಿಷ್ಠಾಧಿಕಾರಿ ಡಾ.ಕೆ.ಕೆ.ರಾಜಾರಾಮ ತಿಳಿಸಿದರು.
ಫೆÇಟೋ ಶೀರ್ಷಿಕೆ: ಕೋವಿಡ್ ಟೆಸ್ಟ್ : ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಟುವಟಿಕೆ ಆರಂಭಿಸಿರುವ ಟ್ರೂನಾಟ್ ಟೆಸ್ಟ್ ಯಂತ್ರದ ಚಟುವಟಿಕೆಗೆ ಆಸ್ಪತ್ರೆ ವರಿಷ್ಠಾಧಿಕಾರಿ ಕೆ.ಕೆ.ರಾಜಾರಾಮ ಚಾಲನೆ ನೀಡಿದರು.







