HEALTH TIPS

ದೇಶಾದ್ಯಂತ ಒಂದೇ ದಿನ ದಾಖಲೆಯ 49,310 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 1.28 ಲಕ್ಷಕ್ಕೆ ಏರಿಕೆ

 
       ನವದೆಹಲಿ: ಭಾರತದಲ್ಲಿ ಹೊಸ ಸೋಂಕಿತರು ಮತ್ತು ಸಾವಿನ ಪ್ರಮಾಣದಲ್ಲಿ ಶುಕ್ರವಾರ ಹೊಸ ದಾಖಲೆ ಸೃಷ್ಟಿಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 49,310 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
     ಇದರೊಂದಿಗೆ ದೇಶದಲ್ಲಿ ಈ ವರೆಗೂ ಒಟ್ಟು ಸೋಂಕಿತರ ಸಂಖ್ಯೆ 12,87,945ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ನಿನ್ನೆ ಒಂದೇ ದಿನ 740 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ಕೂಡ 30,601ಕ್ಕೆ ತಲುಪಿದೆ.
     12,87,945 ಮಂದಿ ಸೋಂಕಿತರ ಪೈಕಿ 8,17,209 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ದೇಶದಲ್ಲಿನ್ನೂ 4,40,135 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.  ಮಹಾರಾಷ್ಟ್ರದಲ್ಲಿ ನಿನ್ನೆ 9,896 ಕೇಸ್, 298 ಸಾವು, ತಮಿಳುನಾಡಿನಲ್ಲಿ 6472, ಹೊಸ ಕೇಸ್, 88 ಮಂದಿ ಸಾವು, ಆಂಧ್ರಪ್ರದೇಶ ದಾಖಲೆಯ 7,998 ಕೇಸ್, 61 ಸಾವು, ಕೇರಳದಲ್ಲಿ 1078 ಹೊಸ ಪ್ರಕರಣ, 5 ಮಂದಿ ಸಾವು ದಾಖಲಾಗಿದೆ.
      ಬಹುತೇಕ ರಾಜ್ಯಗಳಲ್ಲಿ ರೋಗ ಪತ್ತೆ ಪ್ರಮಾಣವನ್ನು ಹಲವು ಪಟ್ಟು ಹೆಚ್ಚಳ ಮಾಡಲಾಗಿದೆ. ಹೀಗಾಗಿ ಹೊಸ ಸೋಂಕಿತರು ಪತ್ತೆಯಾಗುವ ಪ್ರಮಾಣ ಕೂಡ ಏರಿಕೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries