ಕಾಸರಗೋಡು: ಕಿಫ್ ಬಿ (KERALA INFRASTRUCTURE INVESTMENT FUND BOARD)
ಯಿಂದ ಕಾಸರಗೋಡು ಜಿಲ್ಲೆಯ 9 ಸರಕಾರಿ ಶಾಲೆಗಳಲ್ಲಿ ಹಿನ್ನೆಲೆ ಸೌಲಭ್ಯ ಅಭಿವೃಧ್ಧಿ ಪಡಿಸಲು 10.62 ಕೋಟಿ ರೂ.ನ ಆರ್ಥಿಕ ಸಹಾಯ ಮಂಜೂರಾಗಿದೆ. ರಜ್ಯದಲ್ಲಿ ಒಟ್ಟು 56 ಶಾಲೆಗಳಿಗೆ ಈ ನಿಟ್ಟಿನಲ್ಲಿ ಕಿಫ್ ಬಿಯಿಂದ 69.25 ಕೋಟಿ ರೂ. ಮಂಜೂರುಗೊಂಡಿರುವ ಅಂಗವಾಗಿ ಜಿಲ್ಲೆಗೂ ಈ ಸೌಲಭ್ಯ ಒದಗಿದೆ. ಕಾಸರಗೋಡು ವಿಧಾನಸಭೆ ಕ್ಷೇತ್ರದ ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆ (16168969 ರೂ.) ಮತ್ತು ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಮಂಜೇಶ್ವರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ( 17934343 ರೂ.)ಗಳಿಗೆ ಈ ಮೂಲಕ ಸೌಲಭ್ಯ ಒದಗಿದೆ.
ಇಂದು ಉದ್ಘಾಟನೆ:
ಈ ಮೂಲಕ ಜಾರಿಗೊಳಿಸಲಾಗುವ ನಿರ್ಮಾಣ ಕಾರ್ಯಕ್ರಮಗಳ ರಾಜ್ಯ ಮಟ್ಟದ ಉದ್ಘಾಟನೆಯನ್ನು ಇಂದು(ಜು.9) ಮಧ್ಯಾಹ್ನ 3 ಗಂಟೆಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆರವೇರಿಸುವರು.


