ಕುಂಬಳೆ: ಕುಂಬಳೆ ಗ್ರಾ.ಪಂ. ವಾರ್ಷಿಕ ಯೋಜನೆಯಲ್ಲಿ ಒಳಪಟ್ಟ ಪ.ವಿಭಾಗ ವಿದ್ಯಾರ್ಥಿಗಳಿಗೆ ವಿತರಿಸಲಿರುವ ಸೈಕಲನ್ನು ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅವರು ಶುಕ್ರವಾರ ವಿತರಿಸಿ ಚಾಲನೆ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ಗೀತಾ ಎಲ್.ಶೆಟ್ಟಿ, ಗ್ರಾ.ಪಂ.ಸದಸ್ಯೆ ಪುಷ್ಪಲತಾ, ಕಾರ್ಯದರ್ಶಿ ಶಿಬು, ಸಹಾಯಕ ಕಾರ್ಯದರ್ಶಿ ದೀಪೇಶ್ ಉಪಸ್ಥಿತರಿದ್ದರು.