ಕಾಸರಗೋಡು: ರಾಜ್ಯ ಸರ್ಕಾರದ ಕೃಷಿಯಲ್ಲಿ ಸ್ವಾವಲಂಬಿತನ ಒದಗಿಸುವ ಯೋಜನೆ "ಸುಭಿಕ್ಷ ಕೇರಳಂ" ಗಾಗಿ ಕಾಸರಗೋಡು ಜಿಲ್ಲೆಯಲ್ಲಿ ಅತ್ಯಧಿಕ ಬಂಜರು ಜಾಗ ಹಸ್ತಾಂತರಗೊಂಡಿರುವುದು ಪರಪ್ಪ ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿ.
724.72 ಎಕ್ರೆ ಜಾಗ ಇಲ್ಲಿಂದ ಲಭಿಸಿದೆ. ಕಾರಡ್ಕ ಬ್ಲಾಕ್ ಪಂಚಾಯತ್ ನಿಂದ 615.72 ಎಕ್ರೆ, ಕಾಸರಗೋಡು ಬ್ಲಾಕ್ ಪಂಚಾಯತ್ ನಿಂದ 466.11 ಎಕ್ರೆ, ಕಾಞಂಗಾಡ್ ಬ್ಲಾಕ್ ಪಂಚಾಯತ್ ನಿಂದ 429.84 ಎಕ್ರೆ, ಮಂಜೇಶ್ವರ ಬ್ಲಾಕ್ ಪಂಚಾಯತ್ ನಿಂದ 286.67 ಎಕ್ರೆ, ನೀಲೇಶ್ವರ ಬ್ಲಾಕ್ ಪಂಚಾಯತ್ ನಿಂದ 277.06 ಎಕ್ರೆ ಜಾಗ ಲಭ್ಯವಾಗಿದೆ.
ಸುಭಿಕ್ಷ ಕೇರಳಂ ಯೋಜನೆಗಾಗಿ ಗ್ರಾಮಪಂಚಾಯತ್ ಮಟ್ಟದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬಂಜರು ಜಾಗ ಹಸ್ತಾಂತರಗೊಂಡಿರುವುದು ಬೇಡಡ್ಕ ಪಂಚಾಯತ್ ನಿಂದ. ಇಲ್ಲಿಂದ 316.51 ಎಕ್ರೆ ಜಾಗ ಲಭ್ಯವಾಗಿದೆ. ಕಿನಾನೂರು-ಕರಿಂದಳಂ ಗ್ರಾಮಪಂಚಾಯತ್ ನಿಂದ 221.81 ಎಕ್ರೆ ಬಂಜರು ಜಾಗ ಲಭಿಸಿದೆ. ಕುತ್ತಿಕೋಲ್ ಗ್ರಾಮಪಂಚಾಯತ್ ನಿಂದ 155.80 ಎಕ್ರೆ, ಪನತ್ತಡಿ ಪಂಚಾಯತ್ ನಿಂದ 141.22 ಎಕ್ರೆ, ಕಳ್ಳಾರ್ ಪಂಚಾಯತ್ ನಿಂದ 132.11 ಎಕ್ರೆ, ಮಧೂರು ಗ್ರಾಮಪಂಚಾಯತ್ ನಿಂದ 137.56 ಎಕ್ರೆ, ಚೆಂಗಳ ಗ್ರಾಮಪಂಚಾಯತ್ ನಿಂದ 104.58 ಎಕ್ರೆ ಬಂಜರು ಜಾಗ ಲಭಿಸಿದೆ.


