ಮಂಜೇಶ್ವರ:ದೇಶೀಯ ಅಧ್ಯಾಪಕ ಪರಿಷತ್ ಎನ್.ಟಿ.ಯು ಮಂಜೇಶ್ವರ ಉಪಜಿಲ್ಲಾ ವತಿಯಿಂದ ಕಾಸರಗೋಡು ಜಿಲ್ಲೆಯಲ್ಲಿ ವಿದ್ಯಾಧಿಕಾರಿಗಳಾಗಿ ನಿವೃತ್ತಿ ಹೊಂದಿ ಇದೀಗ ನೀರಳಿಕೆ ಎಂಬಲ್ಲಿ ಅನಾಥ ಹೆಣ್ಣು ಮಕ್ಕಳಿಗಾಗಿ ಬಾಲಿಕಾಶ್ರಮವನ್ನು ತೆರೆದು ನಿಸ್ವಾರ್ಥ ಸೇವೆಯನ್ನು ಮಾಡುತ್ತಿರುವ ಟಿ.ನಾರಾಯಣ ಭಟ್ ಇವರಿಗೆ ಗುರುಪೂರ್ಣಿಮೆಯ ದಿನದಂದು ಗುರುವಂದನೆ ಸಲ್ಲಿಸಿತು.
ನಿವೃತ್ತ ಅಧ್ಯಾಪಕ ಚಂದ್ರಹಾಸ ಅವರು ಶಾಲು ಹೊದಿಸಿ ಫಲಪುಷ್ಪಗಳನ್ನು ನೀಡಿ ಶ್ರೀಯುತರನ್ನು ಗೌರವಿಸಿದರು. ಎನ್.ಟಿ.ಯು ರಾಜ್ಯ ಸಮಿತಿ ಕಾರ್ಯದರ್ಶಿ ವೆಂಕಪ್ಪ ಶೆಟ್ಟಿ ಟಿ.ನಾರಾಯಣ ಭಟ್ ಅವರ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಅರವಿಂದಾಕ್ಷ ಭಂಡಾರಿ, ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ಉಪಜಿಲ್ಲಾ ಕಾರ್ಯದರ್ಶಿ ರಘುವೀರ್ ರಾವ್, ಕೋಶಾಧಿಕಾರಿ ಈಶ್ವರ್ ಕಿದೂರ್ ಹಾಗೂ ಕೃಷ್ಣಮೂರ್ತಿ ಉಪಸ್ಥಿತರಿದ್ದರು.