ಉಪ್ಪಳ: ಮನ್ಸೂನ್ ತೀವ್ರಗೊಳ್ಳುತ್ತಿರುವಂತೆ ಉಪ್ಪಳ ಮುಸೋಡಿಯಲ್ಲಿ ಅಪಾಯದಂಚಿನಲ್ಲಿದ್ದ ಮನೆಯೊಂದು ಸಮುದ್ರ ಪಾಲಾಗಿದೆ. ಇತರ ಹಲವು ಮನೆಗಳು ಅಪಾಯದಂಚಿನಲ್ಲಿದೆ.
ಮುಸೋಡಿಯ ಖದೀಜ ಎಂಬವರ ಮನೆ ಸೋಮವಾರ ಸಂಜೆ ಕಡಲು ಪಾಲಾಯಿತು. ಕಳೆದ ಒಂದು ತಿಂಗಳಿಂದ ಕಡಲು ಪ್ರಕ್ಷುಬ್ದಗೊಂಡಿದ್ದು ಕಳೆದೊಂದು ವಾರದಿಂದ ಭಾರೀ ಹೆದ್ದೆರೆಗಳು ದಡವನ್ನು ಅಪ್ಪಳಿಸುತ್ತಿದೆ. ಖದೀಜ ಅವರ ಕುಟುಂಬ ಪರಿಸರದ ಬಾಡಿಗೆ ಕ್ವಾರ್ಟರ್ಸ್ ಒಂದರಲ್ಲಿ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ಪರಿಸರದ ಝಬೀನ ತಸ್ಲೀಮ್, ಹನೀಫ್ ಎಂಬವರ ಮನೆಗಳೂ ಅಪಾಯದಂಚಿನಲ್ಲಿದ್ದು, ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಕಳೆದ ವರ್ಷ ಕಡಲ್ಕೊರೆತಕ್ಕೆ ಇದೇ ಪರಿಸರದ ಮಸೀದಿ ಕಟ್ಟಡ ಹಾಗೂ ಮೂರು ಮನೆಗಳು ಸಮುದ್ರ ಪಾಲಾಗಿದ್ದವು.