ಉಪ್ಪಳ: ಬಿಜೆಪಿ ಪೈವಳಿಕೆ ಪಂಚಾಯತಿ ಸಮಿತಿ ಆಶ್ರಯದಲ್ಲಿ ಭಾರತೀಯ ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನಾಚರಣೆ ಸೋಮವಾರ ಬೆಳಿಗ್ಗೆ ಕಾಯರ್ಕಟ್ಟೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಿತು.
ಬಿಜೆಪಿ ಪೈವಳಿಕೆ ಪಂಚಾಯತಿ ಸಮಿತಿ ಅಧ್ಯಕ್ಷ ಲೋಕೇಶ್ ನೋಂಡ ಜೋಡುಕಲ್ಲು ಅವರು ದೀಪ ಬೆಳಗಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಉದ್ಘಾಟಿಸಿದರು. ಜಿಲ್ಲಾ ಸಮಿತಿ ಸದಸ್ಯ ಹರಿಶ್ಚಂದ್ರ ಮಂಜೇಶ್ವರ ಅವರು ಮುಖರ್ಜಿಯವರ ಜೀವನ-ಸಾಧನೆಗಳ ಬಗ್ಗೆ ಮಾತನಾಡಿದರು. ಮಂಜೇಶ್ವರ ಮಂಡಲ ಕೃಷಿಕ ಮೋರ್ಚಾದ ಅಧ್ಯಕ್ಷ ಸದಾಶಿವ ಚೇರಾಲು, ಬಿಜೆಪಿ ಪಂಚಾಯತಿ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಧರ ಬಿ., ಉಪಾಧ್ಯಕ್ಷ ಸತೀಶ್ ಶೆಟ್ಟಿ ಕುಡಾಲು, ಸತ್ಯಶಂಕರ ಭಟ್, ಗ್ರಾ.ಪಂ. ಸದಸ್ಯರಾದ ಹರೀಶ್ ಬೊಟ್ಟಾರಿ, ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ, ಕಿಶೋರ್, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.
ಸಜಂಕಿಲ ವಾರ್ಡ್‍ನಲ್ಲಿ ಸಂಜೆ ನಡೆದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಂಚಾಯತಿ ಸಮಿತಿ ಮಾಜಿ ಕಾರ್ಯದರ್ಶಿ ಆಟಿಕುಕ್ಕೆ ಸುಬ್ರಹ್ಮಣ್ಯ ಭಟ್ ಪುಷ್ಪಾರ್ಚನೆಗೈದರು. ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಆವಳ ಸಾಗು, ಲಕ್ಷ್ಮಣ ಆವಳ ಸಾಗು ಮೊದಲಾದವರು ಉಪಸ್ಥಿತರಿದ್ದರು.


