ಪೆರ್ಲ: ಆನ್ ಲೈನ್ ತರಗತಿ ವಂಚಿತರಾದ ವಿದ್ಯಾರ್ಥಿಗಳ ಅನುಕೂಲತೆಗಾಗಿ ಪೆರ್ಲದ ನೇತಾಜಿ ಸಾರ್ವಜನಿಕ ಗ್ರಂಥಾಲಯದ ಆಶ್ರಯದಲ್ಲಿ ಉಚಿತ ವ್ಯವಸ್ಥೆ ಏರ್ಪಡಿಸಲಾಗಿದೆ.
ಗ್ರಂಥಾಲಯದಲ್ಲಿ ಸಿದ್ದಗೊಳಿಸಿರುವ ಟಿ.ವಿ ಮೂಲಕ ಅಗತ್ಯವಿರುವ ವಿದ್ಯಾರ್ಥಿಗಳ ಆನ್ ಲೈನ್ ತರಗತಿ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು ಎಣ್ಮಕಜೆ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ.ಇತ್ತೀಚೆಗೆ ಉದ್ಘಾಟಿಸಿದರು. ಗ್ರಂಥಾಲಯದ ಅಧ್ಯಕ್ಷ ರಾಮಕೃಷ್ಣ ರೈ ಕುದ್ವ ಅಧ್ಯಕ್ಷತೆ ವಹಿಸಿದ್ದರು. ಪೆರ್ಲ ಸತ್ಯನಾರಾಯಣ ಫ್ರೌಢಶಾಲಾ ಮುಖ್ಯೋಪಾಧ್ಯಾಯ ರಾಜೇಂದ್ರ ಬಿ., ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಎನ್, ಶಾಲಾ ದೈಹಿಕ ಶಿಕ್ಷಕ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ಉದಯ ಸಾರಂಗ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಗ್ರಂಥಪಾಲಕಿ, ಪೆರ್ಲ ಸತ್ಯನಾರಾಯಣ ಫ್ರೌಢಶಾಲಾ ಅಧ್ಯಾಪಕರು, ಗ್ರಂಥಾಲಯದ ಸದಸ್ಯರು ಉಪಸ್ಥಿತರಿದ್ದರು. ಗ್ರಂಥಾಲಯದ ಕಾರ್ಯದರ್ಶಿ ಸಂಜೀವ ಸಿ.ಎಚ್ ಸ್ವಾಗತಿಸಿ, ಉಪಾಧ್ಯಕ್ಷ ರಾಜೇಶ್ ಬಿ. ವಂದಿಸಿದರು.