ಕಾಸರಗೋಡು: ಜಿಲ್ಲೆಯ ಕೋವಿಡ್ ಬಾಧಿತರಲ್ಲಿ ಅನೇಕರ ಸೋಂಕಿನ ಮೂಲ ಪತ್ತೆಹಚ್ಚಲು ವಿಫಲವಾಗಿರುವುದರಿಂದ ಕಳವಳ ತೀವ್ರಗೊಂಡಿದೆ. ಶುಕ್ರವಾರ ವರದಿಯಾದ 106 ಪ್ರಕರಣಗಳಲ್ಲಿ 21 ಮೂಲಗಳು ಲಭ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‍ನಿಂದ ಸಾವಿಗೀಡಾದ ನಾಲ್ವರ ಸೋಂಕಿನ ಮೂಲವೂ ಇನ್ನೂ ಸ್ಪಷ್ಟವಾಗಿಲ್ಲ. ಪರಿಯಾರಂ ಕಣ್ಣೂರು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಾಲ್ವರೂ ಮೃತಪಟ್ಟರು.
ಶನಿವಾರ ನಿಧನರಾದ ನಫಿಸಾ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದರು. ಗಂಭೀರ ಸ್ಥಿತಿಯಲ್ಲಿ ಅವರನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಿಂದ ಪರಿಯಾರಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಆದರೆ ವೈದ್ಯಕೀಯ ಪರೀಕ್ಷೆಯ ಬಳಿಕವಷ್ಟೇ ಕೋವಿಡ್ ಎಮದು ತಿಳಿದುಬಂದಿತು. ವೆಂಟಿಲೇಟರ್ ಸಹಾಯದಿಂದ ಜೀವ ಸಂರಕ್ಷಿಸಲು ಪ್ರಯತ್ನಿಸಲಾಯಿತಾದರೂ ಬೆಳಿಗ್ಗೆ ಅವರು ನಿಧನಹೊಂದಿದರು. ಈ ಮಧ್ಯೆ ಅವರಿಗೆ ಸೋಂಕು ಹಬ್ಬಿತೆಂದು ಸ್ಪಷ್ಟವಾಗಿಲ್ಲ.
ಮೂರನೇ ಸಾವಾದ ರಾವಣೇಶ್ವರಂ ತನ್ನೋಟ್ ಮೂಲದ ಮಾಧವನ್ ಅವರು ಸಾವು ಕೋವಿಡ್ ಸೋಂಕಿನಿಂದ ಎಂಬುದು ದೃಢಪಟ್ಟಿದೆ. ಅವರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ ಬಳಿಕ ಈ ಸೋಂಕಿಗೆ ಒಳಗಾದರೆಂದು ಶಂಕಿಸಲಾಗಿದೆ. ಎರಡನೇ ಬಲಿಪಶು ಅಣಂಗೂರಿನ ಖೈರುನ್ನಿಸಾ ತೀವ್ರ ನ್ಯುಮೋನಿಯಾದಿಂದ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್ ಸೋಂಕು ಸೋಮವಾರ ಖಚಿತಪಡಿಸಲಾಗಿತ್ತು. ಆದಾರೂ ರೋಗದ ಮೂಲವು ಇನ್ನೂ ಸ್ಪಷ್ಟವಾಗಿಲ್ಲ. ಉಪ್ಪಳ ಹಿದಾಯತ್ ನಗರ ಮೂಲದ ನಫಿಸಾ ಜಿಲ್ಲೆಯಲ್ಲಿ ಕೋವಿಡ್‍ನಿಂದ ಸಾವನ್ನಪ್ಪಿದ ಮೊದಲ ಸೋಂಕಿತೆ. ಅವರು ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಾರದ ಹಿಂದೆ ನಫಿಸಾರಿಗೆ ಸೋಂಕು ದೃಢಪಡಿಸಲಾಗಿತ್ತು. ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ವೆಂಟಿಲೇಟರ್‍ನಲ್ಲಿದ್ದರು. ವಿದೇಶದಲ್ಲಿದ್ದ ನಫಿಸಾ ಅವರ ಪುತ್ರ ಹಿಂದಿರುಗಿದ್ದ. ಆದರೆ ಸೋಂಕು ಈವರೆಗೆ ಪುತ್ರನಲ್ಲಿ ಪತ್ತೆಯಾಗಿಲ್ಲ. ನಫಾಸಾರಿಗೆ ಹೇಗೆ, ಯಾರಿಂದ ಸೋಂಕು ಹರಡಿತು ಎಂಬುದು ಸ್ಪಷ್ಟಚವಾಗಿಲ್ಲ. ಇದೇ ರೀತಿ ಇನ್ನೂ ಅನೇಕ ಸೋಂಕಿತರಿಗೆ ವೈರಸ್ ಹಬ್ಬಿದ ಮೂಲ ಪತ್ತೆಯಾಗಿಲ್ಲ. ಇದು ಸಮುದಾಯ ಹರಡುವಿಕೆಯ ಸೂಚನೆಯೇ ಎಂದು ಶಂಕಿಸಲಾಗುತ್ತಿದೆ. ವಿದೇಶದಿಂದ ಅಥವಾ ಬೇರೆ ಯಾವುದೇ ರಾಜ್ಯದಿಂದ ಬಂದವರಲ್ಲಿ ಯಾರೊಬ್ಬರೂ ತೀವ್ರ ಕೋವಿಡ್ ಕಾಯಿಲೆಯಿಂದ ಬಳಲುತ್ತಿರುವಂತೆ ಕಂಡುಬಂದಿಲ್ಲ. ಸಂಪರ್ಕದ ಮೂಲಕ ಮೂಲವನ್ನು ತಿಳಿಯದ ರೋಗಿಗಳಲ್ಲಿ ಪರಿಸ್ಥಿತಿ ಹದಗೆಡುತ್ತದೆ.
ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಯೊಬ್ಬ ಪರಿಯಾರಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಆ ಬಳಿಕ ಆತನಲ್ಲೂ ಸೋಂಕು ಪತ್ತೆಯಾಗಿತ್ತು. ಈ ಕಾರಣದಿಂದ ಸೋಂಕು ಆಸ್ಪತ್ರೆಯಿಂದ ಹಬ್ಬಿರಬಹುದೇ ಎಂಬ ಆತಂಕ ಕೇಳಿಬಂದಿದೆ.
ಕಾಸರಗೋಡು ಜಿಲ್ಲೆಯ ಆಸ್ಪತ್ರೆಗಳಲ್ಲಿ ಯಾವುದೇ ರೋಗಿಗಳು ತೀವ್ರ ಅಸ್ವಸ್ಥರಾಗಿಲ್ಲ ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ. ತೀವ್ರ ಅಸ್ವಸ್ಥರನ್ನು ಪರಿಯಾರಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗುತ್ತಿದೆ. ಮೂಲವಿಲ್ಲದ ರೋಗಿಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಡಿಎಂಒ ತಿಳಿಸಿದೆ. ಎಂ.ವಿ.ರಾಮದಾಸ್ ಹೇಳಿರುವರು.


