ಕಾಸರಗೋಡು: ಕೊರೊನಾ ವೈರಸ್ ಸೋಂಕುನಿಂದ 64 ವರ್ಷ ಪ್ರಾಯದ ಪಡನ್ನಕ್ಕಾಡ್ ನಿವಾಸಿ ಮಹಿಳೆ ಸಾವಿಗೀಡಾದರು. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ವೈರಸ್‍ನಿಂದ ಸಾವಿಗೀಡಾದವರ ಸಂಖ್ಯೆ ನಾಲ್ಕಕ್ಕೇರಿತು. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಶನಿವಾರ ಸಾವು ಸಂಭವಿಸಿದ್ದು, ಇವರಿಗೆ ಯಾರಿಂದ ರೋಗ ಬಾ„ಸಿದೆ ಎಂಬುದು ತಿಳಿದು ಬಂದಿಲ್ಲ.
ಜಿಲ್ಲೆಯಲ್ಲಿ 105 ಮಂದಿಗೆ ಸೋಂಕು : ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 105 ಮಂದಿಗೆ ಕೊರೊನಾ ವೈರಸ್ ಸೋಂಕು
ದೃಢೀಕರಿಸಲಾಗಿದೆ. ಇದೇ ವೇಳೆ 23 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 88 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.
ಕೇರಳದಲ್ಲಿ 1103 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಶನಿವಾರ 1103 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 1049 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ರೋಗ ಬಾಧಿತರು : ತಿರುವನಂತಪುರ-240, ಕಲ್ಲಿಕೋಟೆ-110, ಕಾಸರಗೋಡು-105, ಆಲಪ್ಪುಳ-102, ಕೊಲ್ಲಂ-80, ಎರ್ನಾಕುಳಂ-79, ಕೋಟ್ಟಯಂ-77, ಮಲಪ್ಪುರಂ-68, ಕಣ್ಣೂರು-62, ಪತ್ತನಂತಿಟ್ಟ-52, ಇಡುಕ್ಕಿ-40, ತೃಶ್ಶೂರು-36, ಪಾಲ್ಘಾಟ್-35, ವಯನಾಡು-17 ಎಂಬಂತೆ ರೋಗ ಬಾಧಿಸಿದೆ.
ಎರ್ನಾಕುಳಂ ಜಿಲ್ಲೆಯಲ್ಲಿ ಜುಲೈ 24 ರಂದು ಸಾವಿಗೀಡಾದ ಎರ್ನಾಕುಳಂ ನಿವಾಸಿ(76) ಗೆ ಕೊರೊನಾ ಸೋಂಕು ದೃಢೀಕರಿಸಲಾಗಿದೆ. ಕಾಸರಗೋಡು ಜಿಲ್ಲೆಯ 63 ವರ್ಷದ ಮಹಿಳೆ, ಕಲ್ಲಿಕೋಟೆ ಜಿಲ್ಲೆಯ 67 ವರ್ಷದ ಮಹಿಳೆ, 58 ವರ್ಷದ ವ್ಯಕ್ತಿ, ಪಾಲ್ಘಾಟ್ ಜಿಲ್ಲೆಯಲ್ಲಿ 40 ವರ್ಷದ ಮಹಿಳೆ ಸಾವಿಗೀಡಾಗಿದ್ದು, ಒಟ್ಟು ಸತ್ತವರ ಸಂಖ್ಯೆ 60 ಕ್ಕೇರಿತು.
ರೋಗ ಬಾ„ತರಲ್ಲಿ 119 ಮಂದಿ ವಿದೇಶದಿಂದ ಬಂದವರು, 106 ಮಂದಿ ಇತರ ರಾಜ್ಯಗಳಿಂದ ಬಂಧವರು. 838 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. 21 ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ. ಇಬ್ಬರು ಬಿಎಸ್‍ಎಫ್, ಮೂವರು ಕೆಎಫ್‍ಸಿ ಸಿಬ್ಬಂದಿಗಳಿಗೆ, ಇಬ್ಬರು ಕೆಎಲ್‍ಎಫ್ ಸಿಬ್ಬಂದಿಗಳಿಗೆ, 8 ಮಂದಿ ಕೆಎಸ್‍ಸಿ ನೌಕರರಿಗೆ, ಮೂವರು ಡಿಎಸ್‍ಸಿ ನೌಕರರಿಗೆ ರೋಗ ಬಾಧಿಸಿದೆ.
ಗುಣಮುಖ : ತಿರುವನಂತಪುರ-229, ಮಲಪ್ಪುರಂ-185, ಪತ್ತನಂತಿಟ್ಟ-150, ಎರ್ನಾಕುಳಂ-77, ಆಲಪ್ಪುಳ-70, ಕಲ್ಲಿಕೋಟೆ-62, ಕೊಲ್ಲಂ-50, ಕೋಟ್ಟಯಂ-49, ವಯನಾಡು-45, ತೃಶ್ಶೂರು-37, ಕಣ್ಣೂರು-36, ಪಾಲ್ಘಾಟ್-24, ಕಾಸರಗೋಡು-23, ಇಡುಕ್ಕಿ-12 ಎಂಬಂತೆ ಗುಣಮುಖರಾಗಿದ್ದಾರೆ. ಪ್ರಸ್ತುತ ಆಸ್ಪತ್ರೆಗಳಲ್ಲಿ 9420 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 8613 ಮಂದಿ ಗುಣಮುಖರಾಗಿದ್ದಾರೆ.
ಮಾಸ್ಕ್ ಧರಿಸದ 150 ಮಂದಿ ವಿರುದ್ಧ ಕೇಸು : ಜಿಲ್ಲೆಯಲ್ಲಿ ಮಾಸ್ಕ್ ಧರಿಸದ 150 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಇದರೊಂದಿಗೆ ಒಟ್ಟು 14566 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.
ಲಾಕ್‍ಡೌನ್ ಉಲ್ಲಂಘನೆ : ನಾಲ್ವರ ಬಂಧನ : ಲಾಕ್‍ಡೌನ್ ಉಲ್ಲಂಘಿಸಿದ ನಾಲ್ವರನ್ನು ಪೆÇಲೀಸರು ಬಂಧಿಸಿದ್ದಾರೆ. ಕಾಸರಗೋಡು-1, ಮಂಜೇಶ್ವರ-1, ಬದಿಯಡ್ಕ-1, ಬೇಕಲ-1 ಎಂಬಂತೆ ಕೇಸು ದಾಖಲಿಸಲಾಗಿದೆ. ಎರಡು ವಾಹನಗಳನ್ನು ವಶಪಡಿಸಲಾಗಿದೆ. ಈ ತನಕ ಒಟ್ಟು ದಾಖಲಿಸಿದ ಕೇಸುಗಳು 3207. 4246 ಮಂದಿಯನ್ನು ಬಂಧಿಸಲಾಗಿದ್ದು, 1289 ವಾಹನಗಳನ್ನು ವಶಪಡಿಸಲಾಗಿದೆ.


