HEALTH TIPS

ಪೋಲೀಸರಿಗೆ ಕೋವಿಡ್-ಭಾಗಶಃ ಮುಚ್ಚಿದ ಕುಂಬಳೆ ಠಾಣೆ


     ಕುಂಬಳೆ: ಕುಂಬಳೆ ಕರಾವಳಿ ಪೋಲೀಸ್ ಠಾಣೆ ಎಸ್‍ಐ ಮತ್ತು ಕುಂಬಳೆ ಪೋಲೀಸ್ ಠಾಣೆಯಲ್ಲಿ ಎಎಸ್‍ಐ ಒಬ್ಬರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಎಸ್‍ಐ ಪಿಲಿಕೋಡ್ ಮೂಲದವರಾಗಿದ್ದು ಎಎಸ್‍ಐ ಪಯ್ಯನ್ನೂರು ನಿವಾಸಿಯಾಗಿದ್ದಾರೆ. ಜೊತೆಗೆ ಕುಂಬಳೆ ಠಾಣೆಯ ಹಿರಿಯ ಸಿವಿಲ್ ಪೆÇಲೀಸ್ ಅಧಿಕಾರಿಯೊಬ್ಬರಿಗೂ ಶುಕ್ರವಾರ ಕೋವಿಡ್ ದೃಢೀಕರಿಸಲಾಗಿದ್ದು ಇನ್ಸ್‍ಪೆಕ್ಟರ್ ಸೇರಿದಂತೆ 20 ಪೋಲೀಸರು ಕ್ವಾರಂಟೈನ್ ಗೊಳಗಾಗಿದ್ದಾರೆ.
       ಎಎಸ್‍ಐ ನಿರೀಕ್ಷಣೆಯಲ್ಲಿದ್ದಾರೆ. ಕರಾವಳಿ ಪೆÇಲೀಸ್ ಠಾಣೆಯಲ್ಲಿನ ಎಸ್‍ಐಗೆ ಸೋಂಕು ದೃಢಪಟ್ಟ ಬಳಿಕ ಕರಾವಳಿ ಪೋಲೀಸ್ ಠಾಣೆ ಭಾಗಶಃ ಕಾರ್ಯನಿರ್ವಹಿಸುತ್ತಿದೆ. 11 ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಶನಿವಾರ ಇಲ್ಲಿಯ 20 ಉದ್ಯೋಗಿಗಳು ಜೊಲ್ಲುರಸ ಪರೀಕ್ಷೆಗೆ ಒಳಗಾಗಿದ್ದಾರೆ. ಕುಂಬಳೆ ಪೋಲೀಸ್ ಠಾಣೆ ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ಮುಚ್ಚಲಾಗಿದೆ. ದೂರುಗಳನ್ನು ಇ-ಮೇಲ್ ಮೂಲಕ ಕಳುಹಿಸಬೇಕು ಎಂದು ಸೂಚಿಸಲಾಗಿದ್ದು ಅರೆ ಖಾಲಿಕ ಪೇದೆ ಮತ್ತು ಇಬ್ಬರು ಪೋಲೀಸರು ಮಾತ್ರ ಇಲ್ಲಿ ಕರ್ತವ್ಯದಲ್ಲಿರುತ್ತಾರೆ.
       ಶುಕ್ರವಾರ ಸೋಂಕು ದೃಢಗೊಂಡ ಪಾಲಕ್ಕಾಡ್‍ನ ಆನ್‍ಲೈನ್ ಪತ್ರಕರ್ತರ ಮನೆಯಲ್ಲಿ ಐದು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಕೋವಿಡ್ ಗುರುವಾರ ಪತ್ರಕರ್ತನಿಗೆ ಸೋಂಕಿರುವುದು ದೃಢಪಟ್ಟಿತ್ತು. ಬಳಿಕ ನಡೆದ ಪರೀಕ್ಷೆಗಳಲ್ಲಿ ಮಗು ಸಹಿತ ಕುಟುಂಬದ ಐವರ ಫಲಿತಾಂಶಗಳು ಧನಾತ್ಮಕವಾಗಿದ್ದವು ಎಂದು ತಿಳಿದುಬಂದಿದೆ. ಇವರೆಲ್ಲರನ್ನೂ ಕೋವಿಡ್ ಚಿಕಿತ್ಸಾಲಯಗಳಿಗೆ ದಾಖಲಿಸಲಾಯಿತು. ಪತ್ರಕರ್ತನ ಅನೇಕ ಸಂಪರ್ಕ ಪಟ್ಟಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು ಹಲವರನ್ನು ಈಗಾಗಲೇ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries