HEALTH TIPS

ವಿವಾಹ ಸಮಾರಂಭದಲ್ಲಿ ಭಾಗವಹಿಸಿದ 43 ಮಂದಿಗಳಿಗೂ ಕೋವಿಡ್: ಭಾಗವಹಿಸಿದ್ದ ಎಲ್ಲರೂ ಸ್ವಯಂ ಕ್ವಾರೆಂಟೈನ್ ಗೆ ತೆರಳಲು ಸೂಚನೆ

 
            ಕಾಸರಗೋಡು: ಚೆಂಗಳ ಗ್ರಾಮ ಪಂಚಾಯತ್ ನ ನಾಲ್ಕನೇ ವಾರ್ಡ್ ನಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬರ ಮನೆಯಲ್ಲಿ ಜು.17ರಂದು ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ 43 ಮಂದಿಗೆ ಈಗಾಗಲೇ ಕೋವಿಡ್ 19 ಖಚಿತಗೊಂಡಿದೆ. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲರೂ 14 ದಿನಗಳ ಕಾಲ ಸ್ವಯಂ ಕ್ವಾರೆಂಟೈನ್ ನಲ್ಲಿ ಮನೆಗಳಲ್ಲಿ ಇರಬೇಕು ಎಂದೂ, ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ವನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
          ಈ ಆದೇಶ ಉಲ್ಲಂಘಿಸುವವರ ವಿರುದ್ಧ ಮತ್ತು ಕೋವಿಡ್ ಪ್ರತಿರೋಧ ಸಂಹಿತೆ ಉಲ್ಲಂಘಿಸಿ ಈ ರೀತಿಯ ಸಮಾರಂಭ ನಡೆಸಿದ ವ್ಯಕ್ತಿಯ ವಿರುದ್ಧ ಕೇರಳ ಅಂಟುರೋಗ ನಿಯಂತ್ರಣ ಕಾಯಿದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪೆÇಲೀಸರಿಗೆ ಆದೇಶ ನೀಡಿದರು. ಈ ಕ್ರಮದ ಪರಿಣಾಮ ಆರೋಪಿಗಳಿಗೆ 2 ವರ್ಷದ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ ಲಭಿಸಬಹುದಾಗಿದೆ ಎಂದು ಅವರು ಹೇಳಿರುವರು.     
       ಕೋವಿಡ್ ಸೋಂಕು ಅತ್ಯಧಿಕ ಪ್ರಮಾಣದಲ್ಲಿ ಹರಡುತ್ತಿರುವ ಈ ಅವಧಿಯಲ್ಲಿ ಸಾರ್ವಜನಿಕರು ನಿಗದಿತ ಸಂಖ್ಯೆಗಿಂತ ಅಧಿಕವಾಗಿ ಸೇರುವ ಸಮಾರಂಭಗಳನ್ನು ಪೂರ್ಣರೂಪದಲ್ಲಿ ಕೈಬಿಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries