ಮಂಜೇಶ್ವರ: ಬಿಜೆಪಿ ಮಂಜೇಶ್ವರ ಪಂಚಾಯತಿ ಸಮಿತಿ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದು ಉತ್ತೀರ್ಣರಾದ ಉದ್ಯಾವರ ಸರ್ಕಾರಿ ಪ್ರೌಢಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿಯರಾದ ಉದ್ಯಾವರ ಗುತ್ತು ಪರಿಶಿಷ್ಟ ಜಾತಿ ಸಮುದಾಯದ ಕಾಲನಿ ನಿವಾಸಿಗಳಾದ ಶ್ರೇಯಾ ಎಚ್, ಶ್ರಾವ್ಯ ಎಚ್ ಎಂಬವರನ್ನು ಬಿಜೆಪಿ ಮಂಜೇಶ್ವರ ಪಂಚಾಯತಿ ಸಮಿತಿ ವತಿಯಿಂದ ಜಿಲ್ಲಾ ಸಮಿತಿ ಸದಸ್ಯ ಯಾದವ ಬಡಾಜೆಯವರು ಶಾಲು ಹೊದಿಸಿ ಹಾಗೂ ಬಿಜೆಪಿ ಮಂಜೇಶ್ವರ ಪಂಚಾಯತಿ ಸಮಿತಿ ಕಾರ್ಯದರ್ಶಿ ಯಶ್ ರಾಜ್ ಉದ್ಯಾವರ ಫಲ ಫುಷ್ಪವನ್ನಿತು ಸನ್ಮಾನಿಸಿದರು. ಈ ವೇಳೆ ಬಿಜೆಪಿ ಮಂಜೇಶ್ವರ ಪಂಚಾಯತಿ ಸಮಿತಿ ಸದಸ್ಯರಾದ ಚಕ್ರೇಶ್ ಗುಡ್ಡೆ, ಯಶ್ ಪಾಲ್ ಉದ್ಯಾವರ, ಕಾರ್ಯಕರ್ತ ದೀಕ್ಷಿತ್ ಉದ್ಯಾವರ ಗುತ್ತು ಉಪಸ್ಥಿತರಿದ್ದರು.


